ಪ್ರಸುತ ಪರಿಸ್ಥಿತಿಯಲ್ಲಿ ಪತ್ರಿಕೋದ್ಯಮ ಮತ್ತು ಸಮಾಜ ಸಹಭಾಗಿತ್ವವನ್ನು ಹೊಂದಿರುತ್ತದೆ. ಪತ್ರಿಕೋದ್ಯಮ ರಂಗದಲ್ಲಿ ಸಹಜವಾಗಿ ಸಮಾಜದಲ್ಲಿ ಕಾಣುವ ಸಮಸ್ಯೆಗಳನ್ನು ನೇರವಾಗಿ ಮತ್ತು ವಿವರವಾಗಿ ಲೇಖನದ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ ಎಂದು ಪತ್ರಕರ್ತ ಗೋಪಾಲ್ ಎಸ್.ಯಡಗೆರೆ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿOದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಪತ್ರಿಕೋದ್ಯಮ ಮತ್ತು ಸಮಾಜ ವಿಷಯ ಕುರಿತು ಮಾತನಾಡಿ, ಅನೇಕ ವರ್ಷಗಳಿಂದ ಪತ್ರಿಕಾರಂಗದಲ್ಲಿ ಕಷ್ಟಕರ ದಿನಗಳನ್ನು ನೋಡಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಪತ್ರಿಕಾರಂಗವೂ ಹೊಸ ರೂಪುರೇಷಗಳನ್ನು ಕಂಡಿದ್ದು, ತುಂಬಾ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಈಗಲೂ ಸಮಾಜದಲ್ಲಿ ದಿನಪತ್ರಿಕೆ ಓದುವ ಅಭ್ಯಾಸಗಳನ್ನು ಸಾಕಷ್ಟು ಜನರು ಹೊಂದಿದ್ದಾರೆ. ಈಗಿನ ಮಾಧ್ಯಮ ರಂಗದಲ್ಲೂ ಪತ್ರಿಕೋದ್ಯಮ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ಎಲ್ಲಾ ಪತ್ರಕರ್ತರು ತಮ್ಮದೇ ಆದ ಛಾಪನ್ನು ಮೂಡಿಸಿ ಈಗಿನ ಕಾಲದಲ್ಲೂ ಒಳ್ಳೆಯ ವರದಿಗಾರರಾಗಿ ಸಾಕಷ್ಟು ಒಳ್ಳೆಯ ವಿಷಯಗಳನ್ನು ಪ್ರಕಟಿಸಿ ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನಗಳನ್ನು ಕಾಪಾಡಿ ಕೊಂಡಿರುತ್ತಾರೆ. ಹೀಗೆ ಸಮಾಜದಲ್ಲಿ ಪತ್ರಿಕೋದ್ಯಮ ಮತ್ತು ಸಮಾಜ ಹೊಂದಾಣಿಕೆ ಇದ್ದು ಸಮಾಜದಲ್ಲಿ ನಡೆಯುವ ವಿಷಯಗಳನ್ನು ಕನ್ನಡಿ ಹಾಗೆ ಪತ್ರಿಕೋದ್ಯಮ ಬಿಂಬಿಸುತ್ತಿದೆ ಎಂದರು. ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಮಂಜುನಾಥ್ ಕದಂ ಮಾತನಾಡಿ, ಗೋಪಾಲ್ ಎಸ್.ಯಡಗೆರೆ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿದ್ದು, ಮತ್ತು ಕನ್ನಡ ಪ್ರಭ ದಿನಪತ್ರಿಕೆ ಪ್ರಧಾನ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ರೋಟರಿ ಶಿವಮೊಗ್ಗ ಪೂರ್ವದ ವತಿಯಿಂದ ಗೌರವಿಸಲಾಗುತ್ತಿದೆ ಎಂದು ಹೇಳಿದರು. ಯಡಗೆರೆ ಅವರು ಸಾಹಿತ್ಯ ಆಸಕ್ತಿ ಹೊಂದಿದ್ದು, ಸಾಕಷ್ಟು ಲೇಖನಗಳು ಹಾಗೂ ಸಾಹಿತ್ಯ ಕೃತಿ ಪುಸ್ತಕಗಳನ್ನು ಬರೆದಿದ್ದಾರೆ. 28 ವರ್ಷಗಳ ಕಾಲ ಪತ್ರಿಕಾರಂಗದಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು, ಲೇಖಕರು ಹಾಗೂ ಪತ್ರಿಕಾ ವರದಿಗಾರರಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಇವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾಗಿರುವುದು ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಸತೀಶ್ ಚಂದ್ರ, ಜಿ.ವಿಜಯ್ ಕುಮಾರ್, ಕಡಿದಾಳ್ ಗೋಪಾಲ್, ವಸಂತ್ ಹೋಬಳಿದಾರ್, ಎಂ.ಪಿ.ನಾಗರಾಜ್, ಇನ್ನರ್‌ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಜಯಂತಿ ವಾಲಿ, ಕಾರ್ಯದರ್ಶಿ ಬಿಂದು ವಿಜಯ್ ಕುಮಾರ್, ಜಿಲ್ಲಾ ಸಂಪಾದಕಿ ಶಬರಿ ಕಡಿದಾಳ್ ಮತ್ತು ಎಲ್ಲಾ ರೋಟರಿ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153