ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ವತಿಯಿಂದ 7.30ಯಿಂದ 10.30 ವರೆಗೆ ಮಂಡ್ಲಿಯ ಕೆ.ಆರ್. ನೀರು ಸರಬರಾಜು ಕೇಂದ್ರಕ್ಕೆ ನೀರು ಸರಭರಾಜು ಘಟಕ್ಕೆ ಭೇಟಿ ನೀಡಿ ನಗರದಲ್ಲಿ ಕೊಳಚೆ ನೀರು ಸರಭರಾಜಾಗುತ್ತಿರುವ ಬಗ್ಗೆ ವಾಸ್ತವಾಂಶ ಪರಿಶೀಲಿಸಿತು.
ನೀರು ಸರಭರಾಜು ಇಲಾಖೆ ಹೇಳುವಂತೆ “ಮಳೆಯ ಕಾರಣದಿಂದ ಆಧಿಕ ಮಣ್ಣೆನ ಅಂಶ ನೀರಿನಲ್ಲಿ ಇದೆ” ಎಂಬುದು ಬಹುತೇಕ ಸುಳ್ಳು ಮನವರಿಕೆ ಆಯಿತು.ಕಾರಣ ಕೊಳಚೆ ನೀರು ಸರಭರಾಜಿಗೆ ನಿರ್ವಹಣೆಯ ವೈಪಲ್ಯವೇ ಮುಖ್ಯ ಕಾರಣ. ಕೆ.ಆರ್. ನೀರು ಶುದ್ದೀಕರಣ ಘಟಕದಲ್ಲಿರುವ 3 ಕ್ಲಾರಿ ಪ್ಲಕ್ಚುವೇಟರ್ ಕೆಲಸ ನಿಲ್ಲಿಸಿ 2 ತಿಂಗಳಾಗಿವೆ. ನೀರು ಶುದ್ದಿಕರಣದಲ್ಲಿ ಶೇಕಡಾ 85% ಶುದ್ದೀಕರಣ ಆಗುವುದೇ ಇಲ್ಲಿ. ಲ್ಯಾಬ್ ಟೆಸ್ಟಿಂಗ್ ಇಕ್ಯೂಪ್ಮೇಂಟ್ಸ ಕೆಲಸ ಮಾಡುತ್ತಿರಲಿಲ್ಲ. ಲ್ಯಾಬ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನೀರು ಶುದ್ದೀಕರಣಕ್ಕೆ ಆಲಂ ಸರಿಯಾದ ಪ್ರಮಾಣದಲ್ಲಿ ಬಳಸುತ್ತಿಲ್ಲ. ನೀರಿಗೆ ಕ್ಲೊರಿನ್ ಮಿಕ್ಸ ಮಾಡಲು ಆಳತೆಯ ಎರಡೂ ಗೇಜ್ ಗಳು ಹಾಳಾಗಿದ್ದು ಆವೈಜ್ಞಾನಿಕವಾಗಿ ಕ್ಲೊರಿನ್ ನೀರಿಗೆ ಸೇರಿಸಲಾಗುತ್ತಿದೆ.
ಹೀಗೆ ನೀರು ಸರಭರಾಜು ಮಂಡಳಿ ನಿರ್ವಹಣೆಗೆ ವಿಫಲರಾಗಿರುವುದೇ ಈ ರೀತಿ ಕೊಳಕು ನೀರು ಸರಭರಾಜಾಗಲು ಕಾರಣ ಎಂದು ವೇದಿಕೆಯ ಮುಖ್ಯಸ್ಥರು ಹೇಳಿದರು.ನೀರು ಶುದ್ದೀಕರಣಕ್ಕೆ ಬೇಟಿ ನೀಡಿದ ತಂಡದಲ್ಲಿ ನಾಗರಿಕ ವೇದಿಕೆಯ ಶ್ರೀ ಕೆ.ವಿ.ವಸಂತ ಕುಮಾರ್, ಡಾ॥ಸತೀಶ್ ಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.