ಚೆನ್ನೈನ ಬಹಳ ಪುರಾತನ ದೇವಸ್ಥಾನವಾದ ಆರು ಪಡೈ ವೀಡು ಮುರುಗರ್ ದೇವರ ಸಮ್ಮುಖದಲ್ಲಿ ಗಣೇಶ ಹೋಮವನ್ನು ಹಾಗು 108 ಕಲಶಗಳ ಪೂಜೆಯನ್ನು ವಿಶೇಷವಾಗಿ ನಡೆಸಲಾಯಿತು.ಈ ದೇವಸ್ಥಾನದಲ್ಲಿ ಮುರುಗರ್ ದೇವರ ಆರು ಅವತಾರವಾದ ತಿರುಚೆಂದೂರ್, ಪಳನಿ, ತಿರುತ್ತನಿ, ಸ್ವಾಮಿಮಲೈ, ಪಲಮುಥಿರ್ಚೊಲೈ, ತಿರುಪುರಂಕುಂಡ್ರಮ್ ದೇವರನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಈ ವಿಶೇಷ ಸಂಧರ್ಭದಲ್ಲಿ ಶಿವಮೊಗ್ಗದ ಶ್ರೀ ಶಬರೀಶ್ ಸ್ವಾಮಿ ರವರು ಮಾಹಿತಿ ವಾಹಿನಿಯವರಿಗೆ ಸಂದರ್ಶನ ನೀಡಿದಾಗ ನವರಾತ್ರಿ ಕುರಿತು ವಿಶೇಷವಾಗಿ ಒಂಬತ್ತು ದಿನಗಳ ಮಹತ್ವವನ್ನು ಕುರಿತು ವಿವರಿಸಿದರು. ಗಣೇಶ ಹೋಮದ ಪೂರ್ಣಾಹುತಿಯ ನಂತರ 108 ಕಲಶಗಳನ್ನು ಅಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ವಿಸ್ತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಹೆಸರಾಂತ ನಾದಸ್ವರ ವಿದ್ವಾಂಸರಾದ ಪದ್ಮನಾಭನ್, ಡೆಪ್ಯುಟಿ DIG ಆರುಮುಗ ನೈನಾರ್, MSME ಇನ್ಸ್ಪೆಕ್ಟರ್ ತಮಿಳರಸಿ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಶಿಷ್ಯವೃಂದ ದವರೆಲ್ಲ ಸೇರಿ ಸನ್ಮಾನಿಸಿದರು. ದೇವಸ್ಥಾನದ ಅರ್ಚಕರು ನಮ್ಮ ದೇಶದ ಸಂಸ್ಕೃತಿ ಹಾಗು ದೈವಿಕ ಶಕ್ತಿ ಇನ್ನು ಹೆಚ್ಚಾಗಲಿ ಎಂದು ಪ್ರಾರ್ಥಿಸಿದರು.