ರಾಜಧಾನಿ ಬೆಂಗಳೂರಿನಲ್ಲಿ ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆ ಮತ್ತು ನೀರು ಶುದ್ಧೀಕರಣ ಘಟಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಂತ್ರಿಮಂಡಲ ಉದ್ಘಾಟಿಸಿದರು.
ಈ ಯೋಜನೆಯು ಮೇಘ ಕನ್ಸ್ಟ್ರಕ್ಷನ್ ಕಂಪನಿ ಬೆಂಗಳೂರು ಇವರ ವತಿಯಿಂದ ನಿರ್ಮಾಣಗೊಂಡಿದೆ. ಕೆಲವು ವರ್ಷಗಳ ಹಿಂದೆ
ಪುಣೆ ನೀರು ಶುದ್ದೀಕರಣ ಘಟಕದ ಕಾಮಗಾರಿಯನ್ನು ಮೇಘ ಕಂಪನಿಯು ನಿರ್ವಹಿಸಿದೆ.
ಈ ಎರಡೂ ಕಾಮಗಾರಿಗಳು ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಉಲ್ಲಾಸ್ ಹೆಗ್ಡೆ ರವರು ಕಾರ್ಯನಿರ್ವಹಿಸಿದ್ದಾರೆ.ಪ್ರಸ್ತುತ ಅವರು ಶಿವಮೊಗ್ಗದಲ್ಲಿ ಎರಡು ವರ್ಷಗಳ ಹಿಂದೆ ವೃಕ್ಷ ಕನ್ಸ್ಟ್ರಕ್ಷನ್ ಎಂಬ ಕಂಪನಿಯು ನೂತನವಾಗಿ ಪ್ರಾರಂಭ ಮಾಡಿ ಶಿವಮೊಗ್ಗದ ಬಂಟರ ಭವನ ಕಾಮಗಾರಿಯನ್ನು ಪೂರೈಸಿದ್ದಾರೆ.ಇದೀಗ ಸಾಗರ ಬಂಟರ ಭವನ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ನೂತನ ಹಾಸ್ಟೆಲ್ ಕಟ್ಟಡದ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ.