ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕ ಫೆಡರೇಷನ್ ರಾಜ್ಯ ಸಮಿತಿ ಕರೆಯ ಮೇರೆಗೆ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿ ತಮ್ಮಲ್ಲಿ ಮನವಿ ಮಾಡುವುದೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆ ಯಡಿಯಲ್ಲಿ ಅನುದಾನಿತ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಬಿಸಿಯೂಟ ತಯಾರಕರಾಗಿ ಕೆಲಸ ನಿರ್ವಹಿಸುತ್ತಿರುವ ಅಡುಗೆಯವರಿಗೆ ಸರ್ಕಾರ ನೀಡುತ್ತಿರುವ ಸಂಭಾವನೆ ತಿಂಗಳಿಗೆ ಮುಖ್ಯ ಅಡುಗೆಯವರಿಗೆ ರೂ. 2.700/- ಇವುಗಳು ಸಹಾಯಕ ಅಡುಗೆಯವರಿಗೆ ರೂ. 2.600/- ಗಳು ಮಾತ್ರ ಈ ವೇತನದಿಂದ ಬಿಸಿಯೂಟ ತಯಾರಕರು ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ನಿರ್ವಹಣೆ ಮಾಡುವುದು ತುಂಬಾ ಕಷ್ಟಕರವಾಗಿದೆ ಆದ್ದರಿಂದ ಅವರಿಗೆ ವೇತನದಲ್ಲಿ ಹೆಚ್ಚಳ ಮಾಡುವುದು, 2021 ರ ಜೂನ್ ಜುಲೈ ತಿಂಗಳು ಗಳ ವೇತನವನ್ನು ಕೂಡಲೇ ಬಿಡುಗಡೆ ಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಯನ್ನು ಈಡೇರಿಸಬೇಕೆಂದು ತಮ್ಮಲ್ಲಿ ಸಂಘಟನೆ ವತಿಯಿಂದ ಮನವಿ ಮಾಡುತ್ತಿದ್ದೇವೆ. ಬೇಡಿಕೆಗಳು:- * ಬಿಸಿಯೂಟ ತಯಾರಕರಿಗೆ 2021 ಜೂನ್ ಜುಲೈ ತಿಂಗಳು ಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು.* ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ದಿನಾಂಕ 15-12-2020 ರಂದು ಆದೇಶಿಸಿರುವ ತೀರ್ಪನ್ನು ಜಾರಿಗೊಳಿಸುವಂತೆ ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನವನ್ನು ಕರ್ನಾಟಕ ಸರ್ಕಾರವು ಜಾರಿಗೊಳಿಸಬೇಕು. * ಕೋವಿಡ್ ಲಾಕ್ ಡೌನ್ ಪರಿಹಾರವಾಗಿ ಇತರೆ ಅಸಂಘಟಿತ ಕಾರ್ಮಿಕರಿಗೆ ನೀಡಿದಂತೆ ಅಸಂಘಟಿತ ವಲಯಕ್ಕೆ ಸೇರಿದ ಬಿಸಿಯೂಟ ತಯಾರಕರಿಗೂ ತಲಾ ರೂ.5000/- ಲಾಕ್ ಡೌನ್ ಪರಿಹಾರ ಕೊಡಬೇಕು. * 60 ವರ್ಷ ವಯಸ್ಸಾದ ಬಿಸಿಯೂಟ ತಯಾರಕರನ್ನು ವಯಸ್ಸಿನ ನೆಪದಿಂದ ಕೆಲಸದಿಂದ ಬಿಡುಗಡೆಗೊಳಿಸದೆ ಬಿಸಿಯೂಟ ತಯಾರಕರ ನ್ನಾಗಿ ಅವರನ್ನು ಕೆಲಸದಲ್ಲಿ ಮುಂದುವರೆಸಬೇಕು. * ಪ್ರತಿ ಶಾಲೆಯಲ್ಲಿ ಅಡುಗೆ ತಯಾರಿಸಲು 2 ಜನ ಅಡುಗೆಯವರು ಕಡ್ಡಾಯವಾಗಿ ಇರುವಂತೆ ನಿಯಮ ರೂಪಿಸಬೇಕು. * ಬಿಸಿಯೂಟ ತಯಾರಕರ ಮೇಲ್ವಿಚಾರಣೆಯನ್ನು ಎಸ್. ಡಿ. ಎಂ.ಸಿ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ವಹಿಸದೆ ಶಿಕ್ಷಣ ಇಲಾಖೆಯಿಂದ ಮೇಲ್ವಿಚಾರಣೆಯನ್ನು ನಿರ್ವಹಿಸಲು ನಿಯಮ ರೂಪಿಸಬೇಕು. * ಕೇಂದ್ರಿಕೃತ ಅಡುಗೆ ಮಾದರಿ ಕೇಂದ್ರ ಬೇಡ ಮತ್ತು ಬಿಸಿಯೂಟ ತಯಾರಿಸಲು ಖಾಸಗಿ ಸಂಸ್ಥೆಗಳಿಗೆ ವಹಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. * ಬಿಸಿಯೂಟ ತಯಾರಕರ ಕೆಲಸ ಖಾಯಂಗೊಳಿಸಿ ಅವರಿಗೆ ಶಾಸನಾತ್ಮಕವಾದ ಸವಲತ್ತುಗಳನ್ನು ನೀಡಬೇಕು. * ಶಾಲೆಯಲ್ಲಿ ಡಿ ಗ್ರೂಪ್ ನೌಕರರು ಇಲ್ಲದೆ ಇರುವುದರಿಂದ ಬಿಸಿಯೂಟ ತಯಾರಕರನ್ನು ಶಾಲೆಯ ಇತರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಅವರನ್ನು ಕಾಯಂಗೊಳಿಸಬೇಕು. * ಬಿಸಿಯೂಟ ತಯಾರಿಕರಿಗೆ ಎಲ್. ಐ. ಸಿ ಆಧಾರಿತ ಪ್ಲಾನನ್ ಯೋಜನೆ ಜಾರಿಗೆ ತರಬೇಕು. * 60 ವರ್ಷ ವಯಸ್ಸಾದ ಬಿಸಿಯೂಟ ತಯಾರಕರನ್ನು ಕೆಲಸದಿಂದ ಬಿಡುಗಡೆಗೊಳಿಸಿದಾಗ ರೂ.2 ಲಕ್ಷ ಇಡಗಂಟು ನೀಡಬೇಕು. * ಬಿಸಿಯೂಟ ತಯಾರಕರಿಗೆ ಪ್ರತಿ ತಿಂಗಳ 5 ನೇ ತಾರೀಕಿನಂದು ವೇತನ ಕೊಡಬೇಕು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153