ಶಿವಮೊಗ್ಗ ನಗರದ ನ್ಯೂಮಂಡ್ಲಿಯಲ್ಲಿರುವ ಮಹಾನಗರ ಪಾಲಿಕೆಯ ಶ್ರೀ ಕೃಷ್ಣರಾಜೇಂದ್ರ ನೀರು ಶುದ್ಧೀಕರಣ ಕೇಂದ್ರಕ್ಕೆ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ತಂಡದ ಪ್ರಮುಖರು ಭೇಟಿ ನೀಡಿ ನೀರು ಶುದ್ಧೀಕರಣ ಯಂತ್ರಗಳ ಕಾರ್ಯನಿರ್ವಹಣೆಯ ವೀಕ್ಷಣೆ ಮಾಡಿದರು.
ಒಂದು ವಾರದ ಹಿಂದೆ ಕುಡಿಯುವ ನೀರು ಕಲುಷಿತವಾಗಿ ನಗರದ ನಾಗರಿಕರಿಗೆ ಸರಬರಾಜು ಆಗುತ್ತಿದ್ದು, ಇದನ್ನು ಕಂಡ ನಾಗರಿಕ ವೇದಿಕೆಯು ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಯಂತ್ರಗಳ ಕಾರ್ಯ ನಿರ್ವಹಣೆ, ಪ್ರಯೋಗಾಲಯ ಘಟಕ, ಆಲಂ ಶುದ್ದಿಕರಣ ಘಟಕ, ಕ್ಲೋರಿನ್ ಘಟಕಗಳ ವೀಕ್ಷಣೆ ಮಾಡಿದ್ದರು, ಆಗ ಬಹಳಷ್ಟು ಅಸಮರ್ಪಕ ನಿರ್ವಹಣೆ ಇರುವ ಬಗ್ಗೆ ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ದೂರು ನೀಡಿ ಯಂತ್ರಗಳ ದುರಸ್ತಿ ಮಾಡಿ ಸೂಕ್ತ ನಿರ್ವಹಣೆಯೊಂದಿಗೆ ನಗರದ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ತಿಳಿಸಲಾಗಿತ್ತು.
ಇಂದು ದಿಡೀರ್ ಭೇಟಿ ನೀಡಿದಾಗ ಶುದ್ಧೀಕರಣ ಟ್ಯಾಂಕ್ ನ ನಿರ್ವಹಣೆ ಈ ಹಿಂದಿನಂತೆಯೇ ಇದೆ.ಕ್ಲಾರಿ ಫ್ಲಾಕ್ಯೂಲೇಟರ್ ಘಟಕ 1 ಮತ್ತು 2 ರಲ್ಲಿನ ಕೆಸರು ಮಣ್ಣನ್ನು ಹೊರಹಾಕಲಾಗಿದೆ. ಆದರೆ ಮತ್ತೆ ಕೆಸರು ಮಣ್ಣು ಸೇರದಂತೆ ಕೆಲಸ ನಿರ್ವಹಿಸಬೇಕಾದ ಯಂತ್ರಗಳು ಕೆಲಸ ಮಾಡಬೇಕು. ಈ ಸಂದರ್ಭದಲ್ಲಿ ನಾಗರಿಕ ರಕ್ಷಣಾ ವೇದಿಕೆ ಒಕ್ಕೂಟದ ಮುಖಂಡರುಗಳು ಉಪಸ್ಥಿರಿದರು.