ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರಪ್ಪನವರ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಮೇಯರ್ ಉಪಸ್ಥಿತಿಯಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು . ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ರುದ್ರೇಗೌಡರು ಸಭೆಯಲ್ಲಿ ಸೂಕ್ತ ಸಲಹೆಗಳನ್ನು ನೀಡಿದರು. ಆಯುಕ್ತರು ಮಾತನಾಡಿ ಇದುವರೆಗೂ ಕೈಗೊಂಡಿರುವ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಿದರು. ಎಲ್ಲಾ ಸದಸ್ಯರುಗಳು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಸಭೆಯ ಪ್ರಾರಂಭದಲ್ಲಿ ಇಹಲೋಕ ತ್ಯಜಿಸಿದ ಪಾಲಿಕೆಯ ಸಿಬ್ಬಂದಿಗಾಗಿ ಮೌನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೃತ ಕೊವಿಡ ವಾಯರ್ ಪಾಪನಾಯಕ ಅವರ ಮಡದಿಗೆ ಪರಿಹಾರದ ಚೆಕ್ ವಿತರಿಸಲಾಯಿತು.
ಈಶ್ವರಪ್ಪನವರು ಸಭೆಯ ಕೊನೆಯಲ್ಲಿ ನಿರ್ಧಾರಗಳನ್ನು ಪ್ರಕಟಿಸಿದರು.ಎಲ್ಲಾ ವಾರ್ಡ್ ಗಳನ್ನು ಆಯಾ ಸದಸ್ಯರು ನಿರ್ವಹಿಸಬೇಕು. ಮೂವತ್ತೈದು ವಾರ್ಡುಗಳಿಗೂ ಕಾರ್ಪೊರೇಟರುಗಳೇ ಮೇಲ್ವಿಚಾರಕರು ಅವರಿಗೆ ಒಬ್ಬ ನೋಡಲ್ ಆಫೀಸರ್ ನ್ನು ನೀಡಲಾಗುತ್ತದೆ.
35ವಾರ್ಡ್ ಗಳಲ್ಲೂ ದಿನಸಿ ಕಿಟ್ ವಿತರಿಸಲು 2ಕೋಟಿ ಹತ್ತು ಲಕ್ಷ ಮೀಸಲು. ಆದರೆ ಕಿಟ್ ನಲ್ಲಿ ಅಕ್ಕಿ ಹಾಗೂ ಗೋಧಿ ಇರುವುದಿಲ್ಲ ಯಾಕೆಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸರ್ಕಾರದಿಂದ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಹಾಗೂ 2ಕೆಜಿ ಗೋಧಿ ನೀಡಲಾಗುತ್ತಿದೆ.
4ವಾರ್ಡ್ ಗಳಿಗೆ 1ಕೋವಿಡ ಸೆಂಟರ್ ಮಂಗಳವಾರ ಎಲ್ಲಾ ಸೆಂಟರ್ ಗಳು ಕಾರ್ಯಾರಂಭ ಮಾಡುತ್ತವೆ ಮಂಗಳವಾರದ ನಂತರ ಶಿವಮೊಗ್ಗ ನಗರಾದ್ಯಂತ ಹೋಂ ಕ್ವಾರಂಟೈನ್ ಇರುವುದಿಲ್ಲ. ಎಲ್ಲರೂ ಕಡ್ಡಾಯವಾಗಿ ಕೋವಿಡ ಕೇರ್ ಸೆಂಟರ್ ಗೆ ವರ್ಗಾಯಿಸಲಾಗುವುದು. ಇದಲ್ಲದೆ ಲಾಡ್ಜ್ ಗಳಲ್ಲಿ ಇರುವ ಅವಕಾಶ ಕೂಡ ಇದೆ ಆದರೆ ರೋಗಿಯೆ ಲಾಡ್ಜ್ ನ ವೆಚ್ಚ ಊಟ ಉಪಾಹಾರದ ವೆಚ್ಚ ಹಾಗೂ ಔಷಧಿಯ ವೆಚ್ಚ ಭರಿಸಬೇಕು ಎಂದು ತಿಳಿಸಿದರು
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ