ಶಿವಮೊಗ್ಗ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ ಎಸ್ ಈಶ್ವರಪ್ಪನವರು ಸಿದ್ದರಾಮಯ್ಯನವರಿಗೆ ಬಹಿರಂಗ ಪತ್ರ ಬರೆದಿರುವುದಾಗಿ ಹೇಳಿದರು .
ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆ ಎಸ್ ಈಶ್ವರಪ್ಪನವರು ಸಿದ್ದರಾಮಯ್ಯನವರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. ಪತ್ರದಲ್ಲಿ 3ವಿಷಯಗಳನ್ನು ತಿಳಿಸಿದ್ದಾರೆ .
ಮೊದಲನೆಯದಾಗಿ ನಾವು ಪ್ರತಿಪಕ್ಷ ನಾಯಕರಾಗಿದ್ದಾಗ ರಾಜ್ಯದಲ್ಲಿ ಭೀಕರ ಬರಗಾಲ ಬಿದ್ದಾಗ ಎಲ್ಲ ಜಿಲ್ಲಾಧಿಕಾರಿಗಳ ಸಭೆಗೆ ನಿಮ್ಮಲಿ ಕೇಳಿಕೊಂಡಿದ್ದೆವು ಆಗ ನಿಮ್ಮ ಘನ ಸರ್ಕಾರ ಅನುವು ಮಾಡಿಕೊಡಲಿಲ್ಲ. ಈಗ ನೀವು ನಮ್ಮಲ್ಲಿ ಕೇಳುತ್ತಿದ್ದೀರಿ. ನಿಮ್ಮ ಸರ್ಕಾರದಲ್ಲಿ 1 ಸಂವಿಧಾನ ನಮ್ಮ ಸರ್ಕಾರದಲ್ಲಿ 1ಸಂವಿಧಾನವೇ. ಸಂವಿಧಾನ ಎಲ್ಲರಿಗೂ ಒಂದೇ ಅಲ್ಲವೇ. ಆ ಸಮಯದಲ್ಲಿ ನೀವು ಅನುಮತಿ ಕೊಡದಿದ್ದರೂ ಸಹ ನಾನು ಅನೌಪಚಾರಿಕವಾಗಿ ರಾಜ್ಯ ಪ್ರವಾಸ ಕೈಗೊಂಡು ಎಲ್ಲಾ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದೇನೆ. ಹಾಗಾಗಿ ಈಗ ಜಿಲ್ಲಾಧಿಕಾರಿಗಳ ಸಭೆಗೆ ಅನುಮತಿ ಕೇಳುವ ನೈತಿಕತೆ ನಿಮಗಿಲ್ಲ ಎಂದು ಹೇಳಿದರು . ಸರ್ಕಾರದ ಪಂಚೇಂದ್ರಿಯ ಕೆಲಸ ಮಾಡುತ್ತಿಲ್ಲವೇ ಎಂದು ಕೇಳಿದ್ದೀರಿ ಆಗ ನಿಮ್ಮ ಸರ್ಕಾರವಿದ್ದಾಗ ನಿಮ್ಮ ಸರ್ಕಾರದ ಪಂಚೇಂದ್ರಿಗಳು ಕೆಲ್ಸ ಮಾಡುತ್ತಿರಲಿಲ್ಲವೇ ?
ಎರಡನೆಯದಾಗಿ ಲಸಿಕೆಯ ವಿರುದ್ಧ ಅಪಪ್ರಚಾರ ಮಾಡುತ್ತಲೇ ಬಂದಿದ್ದೀರಿ ಇನ್ನಾದರೂ ಅಪಪ್ರಚಾರವನ್ನು ನಿಲ್ಲಿಸಿ ರಾಜ್ಯದ ಜನತೆಗೆ ಕ್ಷಮೆ ಕೇಳಿ .
ಮೂರನೆಯದಾಗಿ ಒಬ್ಬ ಜವಾಬ್ದಾರಿಯುತ ವಿರೋಧ ಪಕ್ಷ ನಾಯಕರಾಗಿ ಸರ್ಕಾರಕ್ಕೆ ಅಗತ್ಯ ಸಲಹೆ ಸೂಚನೆಗಳನ್ನು ಕೊಡಿ ಎಂದು ಹೇಳಿದರು .
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ