ಅಯೋಡಿನ್ ಕೊರತೆಯಿಂದ ಆಗಬಹುದಾದ ಆರೋಗ್ಯ ಸಮಸ್ಯೆಗಳು ಹಾಗೂ ಇಲಿಜ್ವರವನ್ನು ಬಾರದಂತೆ ತಡೆಯಬಹುದಾದ್ದರಿಂದ ಈ ಕುರಿತು ಅರಿವು ಪಡೆದುಕೊಂಡು ಮುನ್ನೆಚ್ಚರಿಕೆಯಿಂದ ಈ ಸಮಸ್ಯೆಗಳಿಂದ ಪಾರಾಗಬಹುದು ಎಂದು ಡಿಹೆಚ್‌ಓ ಡಾ.ನಟರಾಜ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಎನ್‌ಸಿಟಿ ಘಟಕ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಶಿವಮೊಗ್ಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟಿçÃಯ ಸೇವಾ ಯೋಜನಾ ಘಟಕಗಳು, ಶಿವಮೊಗ್ಗ ಇವರ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಅಯೋಡಿನ್ ಕೊರತೆ ನಿಯಂತ್ರಣಾ ದಿನ ಹಾಗೂ ಇಲಿಜ್ವರ ನಿಯಂತ್ರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಯೋಡಿನ್ ಒಂದು ಸೂಕ್ಷö್ಮ ಪೋಷಕಾಂಶವಾಗಿದ್ದು ಇದರ ಕೊರತೆ ಉಂಟಾದರೆ ಗಳಗಂಡ ಖಾಯಿಲೆ ಸೇರಿದಂತೆ ಇನ್ನಿತರೆ ಆರೋಗ್ಯ ಸಮಸ್ಯೆಗಳು ಬರುತ್ತವೆ. ಹಾಗೂ ಇಲಿ ಮತ್ತು ಇತರೆ ಸಾಕು ಪ್ರಾಣಿಗಳ ಮೂತ್ರ ನೀರು, ಆಹಾರದಲ್ಲಿ ಬೆರೆತರೆ ಇಲಿಜ್ವರ ಉಂಟಾಗುತ್ತದೆ. ಇವೆರಡನ್ನೂ ನಾವು ನಿಯಂತ್ರಿಸಿ, ಬಾರದಂತೆ ತಡೆಯಬಹುದು. ಅಯೋಡಿನ್ ಯುಕ್ತ ಉಪ್ಪನ್ನು ಬಳಸಬೇಕು. ಇಲಿಜ್ವರದಿಂದ ಪಾರಾಗಲು ನೀರು, ಆಹಾರವನ್ನು ಮುಚ್ಚಿಡಬೇಕು. ಹಾಗೂ ಸಮಸ್ಯೆ ಬಂದ ತಕ್ಷಣ ಸೂಕ್ತ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದರು.
ಇಂದಿನ ಆಧುನಿಕ ಯುಗದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿಯನ್ನು ಶೀಘ್ರದಲ್ಲಿ ಪಡೆಯಬಹುದು. ಆದರೆ ಎಷ್ಟೋ ಸಮಸ್ಯೆಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಮೂಲಕ ಮಾಹಿತಿ ಪಡೆದು ಇತರರಿಗೂ ತಿಳಿಸಬೇಕು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್ ಮಾತನಾಡಿ. ಅಯೋಡಿನ್ ಕೊರತೆ ಸಮಸ್ಯೆಗಳು ಮತ್ತು ಇಲಿಜ್ವರ ಇವೆರಡೂ ಬಾರದಂತೆ ತಡೆಯಬಹುದಾದ ಮತ್ತು ಗುಣಪಡಿಸಬಹುದಾದ ಖಾಯಿಲೆಗಳಾಗಿವೆ. ಅಯೋಡಿನ್ ಕೊರತೆ ನೀಗಿಸಲು ಎಲ್ಲೆಡೆ ಅಯೋಡಿನ್ ಯುಕ್ತ ಉಪ್ಪನ್ನು ಮಾರಾಟ ಮಾಡಲು ಸರ್ಕಾರ ಸೂಚಿಸಿದೆ. ಐಎಸ್‌ಐ ಮತ್ತು ನಗುವ ಸೂರ್ಯನ ಗುರುತಿರುವ ಉಪ್ಪನ್ನೇ ಖರೀದಿಸಿ ಉಪಯೋಗಿಸಬೇಕು.
ಇಲಿಜ್ವರದಿಂದ ಪಾರಾಗಲು ನಾವು ಶೇಖರಿಸುವ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಮುಚ್ಚಿಡಬೇಕು. ಇಲಿ ಮತ್ತು ಇತರೆ ಸಾಕು ಪ್ರಾಣಿಗಳ ಮೂತ್ರದಿಂದ ಈ ಜ್ವರ ಬರುವುದರಿಂದ ಆಹಾರ ಪದಾರ್ಥಗಳು, ನೀರನ್ನು ಮುಚ್ಚಿಡಬೇಕು. ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಸ್ವಯಂ ಸೇವಕರು ಈ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಬೇಕೆಂದರು.
ಆರ್‌ಸಿಹೆಚ್ ಅಧಿಕಾರಿ ಡಾ.ಮಲ್ಲಪ್ಪ ಓ ಮಾತನಾಡಿ, ನಮಗೆ ಮುಖ್ಯವಾಗಿ ಶೇ.50 ರಷ್ಟು ಕಾರ್ಬೋಹೈಡ್ರೇಟ್, ಶೇ.30 ಪ್ರೋಟಿನ್ ಮತ್ತು ಶೇ.20 ಕೊಬ್ಬು ಬೇಕಾಗುತ್ತದೆ. ಅಯೋಡಿನ್ ಒಂದು ಸೂಕ್ಷö್ಮಪೋಷಕಾಂಶವಾಗಿದ್ದು ಸೂಜಿಮೊನೆಯಷ್ಟು ದೈನಂದಿನವಾಗಿ ಆಹಾರದಲ್ಲಿ ಬೇಕಾಗುತ್ತದೆ.
ಅಯೋಡಿನ್ ಕೊರತೆಯಿಂದ ಗಳಗಂಡ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹದಿಹರೆಯದವರದಲ್ಲಿ ಇದರ ಕೊರತೆಯಿಂದ ಅನಾಸಕ್ತಿ, ನಿದ್ರೆ ಇತರೆ ಸಮಸ್ಯೆ, ಗರ್ಭಿಣಿಯರಲ್ಲಿ ಅಯೋಡಿನ್ ಕೊರತೆಯಾದರೆ ಗರ್ಭಪಾತ, ಕುಬ್ಜ, ಬುದ್ದಿಮಾಂಧ್ಯ ಮಕ್ಕಳ ಜನನ, ಮಕ್ಕಳಲ್ಲಿ ಕೊರತೆಯಾದರೆ ಕಲಿಕೆಯಲ್ಲಿ ಹಿನ್ನಡೆ, ಬೆಳವಣಿಗೆ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಸರ್ಕಾರ ಎಲ್ಲರೂ ಅಯೋಡಿನ್‌ಯುಕ್ತ ಉಪ್ಪನ್ನೇ ಬಳಸಬೇಕೆಂದು ಕಾನೂನು ತಂದಿದೆ. ಐಎಸ್‌ಐ, ನಗುವ ಸೂರ್ಯನ ಗುರುತಿನ ಅಡುಗೆ ಉಪ್ಪನ್ನೇ ಬಳಸಬೇಕು. ಹಾಗೂ ಇದನ್ನು ತಂಪಾದ ಸ್ಥಳದಲ್ಲಿ, ಮುಚ್ಚಿಸಬೇಕು. ಹಾಗೂ ಅಡುಗೆ ಅಂತ್ಯದಲ್ಲಿ ಉಪ್ಪನ್ನು ಆಹಾರ ಪದಾರ್ಥಗಳಿಗೆ ಹಾಕಬೇಕೆಂದು ಸಲಹೆ ನೀಡಿದರು.
ಇಲಿಜ್ವರ ಒಂದು ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಕೇವಲ ಇಲಿ ಮಾತ್ರ ಸಾಕು ಪ್ರಾಣಿಗಳ ಮೂತ್ರದಿಂದ ಇದು ಹರಡುತ್ತದೆ. ಆದ್ದರಿಂದ ಆಹಾರ ಪದಾರ್ಥ ಇತರೆ, ತಿನ್ನುವ ವಸ್ತುಗಳನ್ನು ಮುಚ್ಚಿಡಬೇಕು. ವಿಪರೀತ ಜ್ವರ, ತಲೆನೋವು, ಮೈಕೈನೋವು, ಕೆಮ್ಮು, ಕಫ, ಜಾಂಡಿಸ್, ಕಿಡ್ನಿ ಸಮಸ್ಯೆಗಳು ಇವೆಲ್ಲಾ ಇಲಿಜ್ವರ ಲಕ್ಷಣಗಳಾಗಿದ್ದು ಸರಳ ಮತ್ತು ಸೂಕ್ತ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು. ಸಾಕು ಪ್ರಾಣಿ ಸಾಕುವವರು, ಹೊಲಗದ್ದೆಗಳಲ್ಲಿ ಕೆಲಸ ಮಾಡುವವರು ಈ ರೋಗಕ್ಕೆ ಹೆಚ್ಚು ತುತ್ತಾಗುತ್ತಾರೆ. ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಇದು ಮಾರಣಾಂತಿಕವಾಗಬಹುದು. ಆದ್ದರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಜಿ.ಚನ್ನಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಎಲ್ಲ ಆಹಾರ ವಸ್ತುಗಳು ಕಲಬೆರಕೆಯಾಗಿದೆ. ಎಳನೀರು ಮತ್ತು ತಾಯಿ ಎದೆಹಾಲು ಹೊರತು ಪಡಿಸಿ ಎಲ್ಲ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಕಾಣಬಹುದು. ಇದಕ್ಕೆ ಕಾರಣ ಮನುಷ್ಯನ ದುರಾಸೆ. ಆಹಾರವನ್ನು ರುಚಿಗೊಳಿಸಲು, ಆಕರ್ಷಿಸಲು ರಾಸಾಯನಿಕ, ಬಣ್ಣಗಳನ್ನು ಹಾಕಲಾಗುತ್ತಿದೆ. ಅನುಮಾನಿಸಿ ತಿನ್ನುವ ಪರಿಸ್ಥಿತಿ ಬಂದಿದೆ. ಆದ್ದರಿಂದ ನಾವೆಲ್ಲ ಉತ್ತಮ ಜೀವನಶೈಲಿ, ಆಹಾರ ಕ್ರಮ ಅಳವಡಿಸಿಕೊಳ್ಳಬೇಕು. ಯಥೇಚ್ಚವಾಗಿ ನೀರು ಕುಡಿಯಬೇಕು. ಬೆವರು ಬರುವಂತೆ ದೈಹಿಕ ಶ್ರಮ ಮಾಡಬೇಕು. ಜಿಲ್ಲೆಯಲ್ಲಿ ಆಸ್ಪತ್ರೆಗಳಿಗಿಂತ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಬೇಕೆಂದರು.
ಕಾರ್ಯಕ್ರಮದಲ್ಲಿ ಆಶಾ ಮತ್ತು ಆರೋಗ್ಯ ಕಾರ್ಯಕರ್ತರು ಅಯೋಡಿನ್ ಉಪ್ಪು ಹೌದೋ ಅಲ್ಲವೋ ಎಂದು ಕಂಡು ಹಿಡಿಯುವ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡವೀರಪ್ಪ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಳಾದ ಸುಧಾಕರ್, ಡಾ.ಸೋಮಶೇಖರ್, ಜಾಹ್ನವಿ, ವಾರ್ತಾ ಸಹಾಯಕಿ ಭಾಗ್ಯ ಎಂ ಟಿ ಪಾಲ್ಗೊಂಡಿದ್ದರು.