ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಪದಾಧಿಕಾರಿಗಳು ಗ್ರಾ.ಪಂ ಮತ್ತು ವಾರ್ಡುವಾರು ಫಲಾನುಭವಿಗಳನ್ನು ಭೇಟಿ ಮಾಡಿ ಕುಂದು ಕೊರತೆಗಳನ್ನು ಆಲಿಸಿ ಪಟ್ಟಿ ಮಾಡಬೇಕೆಂದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಟಾನದಲ್ಲಿ ಕಂಡುಬರುತ್ತಿರುವ ಲೋಪಗಳ ಕುರಿತು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ಹಾಗೂ ರಾಜ್ಯ ಮಟ್ಟದ ಸಭೆ ಕರೆದಾಗ ಚರ್ಚಿಸಲಾಗುವುದು ಎಂದರು.
ಪಂಚಾಯ್ತಿ ಮತ್ತು ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ನೋಡಿಕೊಳ್ಳಲು ಪ್ರಜಾ ಪ್ರತಿನಿಧಿಗಳನ್ನು ನೇಮಿಸಲಾಗುವುದು. ಹಾಗೂ ಪ್ರತಿ ಯೋಜನೆಯ ಉಸ್ತುವಾರಿ ನೋಡಿಕೊಳ್ಳಲು ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಲಾಗುವುದು ಎಂದರು.


‘ನಮ್ಮ ಗ್ಯಾರಂಟಿ ನಮ್ಮ ಮನೆಗೆ…

ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ದೂರುಗಳು ಮತ್ತು ಸಮಸ್ಯೆಗಳನ್ನು ಸ್ವೀಕರಿಸಿ ಸಾಧ್ಯವಾದರೆ ಸ್ಥಳದಲ್ಲೇ ಬಗೆಹರಿಸಲು ಹಾಗೂ ಫಲಾನುಭವಿಗಳನ್ನು ಹತ್ತಿರದಿಂದ ಕಂಡು ಸರ್ಕಾರದ ಯೋಜನೆಗಳನ್ನು ವಿವರಿಸಿ ಸ್ಪಂದಿಸಲು ಪ್ರಥಮ ಬಾರಿಗೆ ‘ನಮ್ಮ ಗ್ಯಾರಂಟಿ ನಮ್ಮ ಮನೆಗೆ’ ಎಂಬ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲು ಪ್ರಾಧಿಕಾರ ಉದ್ದೇಶಿಸಿದೆ.


ಜನಪರವಾದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾದದ್ದು ಪ್ರಾಧಿಕಾರದ ಕರ್ತವ್ಯ. ಈ ಯೋಜನೆಗಳಿಂದ ಹೊರಗುಳಿದ ಅರ್ಹ ಫಲಾನುಭವಿಗಳು ಸಲ್ಲಿಸಿರುವ ವಿವರಗಳು, ಮಾಹಿತಿಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ, ತಾಂತ್ರಿಕ ತಪ್ಪುಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಲಾಭ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಬAಧಿಸಿದ ಅಧಿಕಾರಿಗಳು ಕಾರ್ಯವೆಸಗಬೇಕು ಎಂದರು.


ಸಭೆಯಲ್ಲಿ ಶಿಕಾರಿಪುರ ತಾಲ್ಲೂಕು ಸಮಿತಿ ಅಧ್ಯಕ್ಷರಾದ ಎಸ್.ಪಿ.ನಾಗರಾಜಗೌಡ ಮಾತನಾಡಿ ತಾಲ್ಲೂಕುಗಳ ಸಭೆ ಸಮಾರಂಭಗಳಿಗೆ ತಾಲ್ಲೂಕು ಅಧ್ಯಕ್ಷರನ್ನು ಆಹ್ವಾನಿಸಲಾಗುತ್ತಿಲ್ಲ. ವಿಶೇಷವಾಗಿ ಶಿಕಾರಿಪುರದಲ್ಲಿ ಆಹ್ವಾನ ನೀಡಲಾಗುತ್ತಿಲ್ಲ. ಕೆಲವು ತಾಲ್ಲೂಕುಗಳ ಪತ್ರಿಕೆಗಳಲ್ಲಿ ತಾಲ್ಲೂಕು ಅಧ್ಯಕ್ಷರ ಹೆಸರನ್ನು ಮುದ್ರಿಸಲಾಗುತ್ತಿದೆ. ತಾಲ್ಲೂಕು ಅಧ್ಯಕ್ಷರಿಗೂ ಶಿಷ್ಟಾಚಾರ ಅನ್ವಯವಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟನೆ ಕೋರಿದರು.


ಸದಸ್ಯರಾದ ಶಿವಾನಂದ್ ಶೆಟ್ಟಿ ಮಾತನಾಡಿ ಹೆಬ್ಬೆಟ್ಟು ಸವೆದು ಬಯೋಮೆಟ್ರಿಕ್ ನೀಡಲು ಸಾಧ್ಯವಾಗದ ವೃದ್ದರಿಗೆ ಪಡಿತರ ನೀಡುವುದು ಹಾಗೂ ಬಿಪಿಎಲ್ ನಿಂದ ಎಪಿಎಲ್ ಗೆ ಬದಲಾದ ಕಾರ್ಡುಗಳ ಕುರಿತು ಮಾಹಿತಿ ಕೋರಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಅವಿನ್ ಮಾತನಾಡಿ, ಈವರೆಗೆ ವಾರ್ಷಿಕ ಆದಾಯ 1.20 ಲಕ್ಷ ಮೀರಿದ, ಐಟಿ ತುಂಬುವ ಮತ್ತು ಸರ್ಕಾರಿ ನೌಕರರು ಸೇರಿ ಒಟ್ಟು 53 ಸಾವಿರ ಪಡಿತರ ಕಾರ್ಡ್ ಅನರ್ಹಗೊಳಿಸಿ ಎಪಿಎಲ್ ಆಗಿ ಪರಿವರ್ತಿಸುವಂತೆ ಆದೇಶ ಬಂದಿದೆ. ಹಾಗೂ 80 ವರ್ಷ ಮೇಲ್ಪಟ್ಟ 80 ಜನರಿಗೆ ಅವರ ಮನೆಗೆ ಪಡಿತರ ನೀಡಲಾಗುತ್ತಿದೆ. ಕುಟುಂಬದಲ್ಲಿ ಕೇವಲ ಒಬ್ಬ ವ್ಯಕ್ತಿ ಇರುವ 80 ವರ್ಷ ತುಂಬಿದವರಿಗೆ ಈ ರೀತಿ ವ್ಯವಸ್ಥೆ ಇದೆ. ಬಯೋಮೆಟ್ರಿಕ್ ಸಾಧ್ಯವಾಗದ 2370 ಪಡಿತರ ಚೀಟಿದಾರರಿಗೆ ಬಯೋಮೆಟ್ರಿಕ್‌ನಿಂದ ವಿನಾಯಿತಿ ನೀಡಲಾಗಿದೆ. ಇದೀಗ ಅಂತಹವರ ಮೊಬೈಲ್ ನಂ ತೆಗೆದುಕೊಂಡು ಅಪ್‌ಡೇಟ್ ಮಾಡುವ ವ್ಯವಸ್ಥೆ ಬಂದಿದೆ ಎಂದು ಮಾಹಿತಿ ನೀಡಿದರು.
ಸದಸ್ಯರು, ವಾರ್ಷಿಕ ಆದಾಯದ ಕಾರಣಕ್ಕೆ ಕೆಲವರ ಬಿಪಿಎಲ್ ಕಾರ್ಡುಗಳು ಎಪಿಎಲ್‌ಗೆ ಬದಲಾಗಿದ್ದು, ಈ ಬಗ್ಗೆ ಹಲವು ಗೊಂದಲಗಳಿವೆ ಇದನ್ನು ಇನ್ನೊಮ್ಮೆ ಪರಿಶೀಲಿಸಬೇಕು. ಹಾಗೂ ಮುಂದಿನ ಸಭೆಗೆ ಐಟಿ ಮತ್ತು ಜಿಎಸ್‌ಟಿಗೆ ಸಂಬAಧಿಸಿದ ಅಧಿಕಾರಿಗಳನ್ನು ಸಭೆಗೆ ಕರೆಯಬೇಕೆಂದು ಕೋರಿದರು.


ಕೌಶಲ್ಯಾಭಿವೃದ್ದಿ ಇಲಾಖೆಯಲ್ಲಿ ಎಸ್‌ಎಸ್‌ಎಲ್‌ಸಿ ಆದವರಿಗೆ ತರಬೇತಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಡೇಟಾಬೇಸ್, ಡೇಟಾಸೈನ್ಸ್ ಇತರೆ ವಿಷಯ ಕುರಿತು ತರಬೇತಿ ನೀಡಲಾಗುವುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸುರೇಶ್ ತಿಳಿಸಿದರು.


ಹೊಸನಗರ ತಾಲ್ಲೂಕು ಅಧ್ಯಕ್ಷ ಚಿದಂಬರ್ ಮಾತನಾಡಿ ತಾಲ್ಲೂಕಿನಲ್ಲಿ ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಕುರಿತು ಸರ್ವೇ ನಡೆಸಲಾಗಿದ್ದು, ಇಲಾಖೆಯ ಫಲಾನುಭವಿಗಳು ಮತ್ತು ಸರ್ವೇಯಲ್ಲಿ ಕೆಲ ವ್ಯತ್ಯಾಸವಿದ್ದು ಈ ಬಗ್ಗೆ ಸ್ಪಷ್ಟನೆ ಬೇಕು. ಹಾಗೂ ವ್ಯತ್ಯಾಸಗಳನ್ನು ಸರಿಪಡಿಸಲು ಎಲ್ಲ ಕಾರ್ಡುದಾರರ ಇಕೆವೈಸಿ ಮಾಡಿಸಬೇಕೆಂದು ತಿಳಿಸಿದರು.


ಭದ್ರಾವತಿ ತಾಲ್ಲೂಕು ಹಾಗೂ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾದ ಮಣಿಶೇಖರ್ ಮತ್ತು ಮಧು ಅವರು ಸಹ ತಾಲ್ಲೂಕು ಅಧ್ಯಕ್ಷರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲು ಶಿಷ್ಟಾಚಾರದ ಕುರಿತು ಸ್ಪಷ್ಟನೆ ಕೋರಿದರು.

ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ಶಿವಣ್ಣ ಮಾತನಾಡಿ, ಪ್ರಾಧಿಕಾರದ ಸದಸ್ಯರಿಗೆ ಯೋಜನೆಗಳ ಅನುಷ್ಟಾನ ಮಾಡುವ ಅಧಿಕಾರಿಗಳ ಸಂಪರ್ಕ ಸಂಖ್ಯೆಯನ್ನು ನೀಡಬೇಕು. ಹಾಗೂ ಫಲಾನುಭವಿಗಳಿಗೆ ಆಗುತ್ತಿರುವ ತಾಂತ್ರಿಕ ತೊಂದರೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ನಿರ್ಣಯವನ್ನು ರಾಜ್ಯ ಸರ್ಕಾರಕ್ಕೆ ಮಂಡಿಸಬೇಕೆAದರು. ಉಪಾಧ್ಯಕ್ಷರಾದ ರಮೇಶ್ ಇಕ್ಕೇರಿ, ಯೋಜನೆ ಅನುಷ್ಟಾನದಲ್ಲಿ ಫಲಾನುಭವಿಗಳ ಸಣ್ಣ ಪುಟ್ಟ ದೋಷಗಳಿದ್ದರೆ ಅಧಿಕಾರಿಗಳು ಸರಿಪಡಿಸಬೇಕು, ಅಲೆದಾಡಿಸಬಾರದು ಎಂದರು.ಸಭೆಯಲ್ಲಿ ಪ್ರಾಧಿಕಾರದ ಉಪಾಧ್ಯಕ್ಷರುಗಳು, ತಾಲ್ಲೂಕು ಸಮಿತಿಯ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *