ಶ್ರೀ ಕೃಷ್ಣಮೂರ್ತಿ ಪೋಲಿಸ್ ಉಪಾದೀಕ್ಷಕರು, ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ರವರು ಶಿವಮೊಗ್ಗ ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಸೈಬರ್ ಕ್ರೈಂ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ಕಾಲೇಜಿನ ವಿಧ್ಯಾರ್ಥಿಗಳಿಗೆ ಇತ್ತೀಚಿನ ದಿನಗಳಲ್ಲಿ ನೆಡೆಯುತ್ತಿರುವರ ಸೈಬರ್ ಅಪರಾಧಗಳ ಬಗ್ಗೆ ಈ ಕೆಳಕಂಡಂತೆ ಮಾಹಿತಿ ನೀಡಿರುತ್ತಾರೆ.
1) ಅಪರಿಚಿತ ವ್ಯಕ್ತಿಗಳು ನಿಮ್ಮ ಮೊಬೈಲ್ ಗೆ ವಿಡಿಯೋ ಕರೆ ಮಾಡಿ, ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ನೀವು ಡಾರ್ಕ್ ವೆಬ್ ನಲ್ಲಿ ಮಾದಕ ವಸ್ತುವಿನ ವ್ಯವಹಾರ ನಡೆಸಿರುವ ಬಗ್ಗೆ ಮಾಹಿತಿ ದೊರೆಕಿದ್ದು, ನಿಮ್ಮ ಮೇಲೆ ಪ್ರಕರಣ ದಾಖಲಿಸಿಲಾಗುತ್ತದೆ. ಒಂದು ವೇಳೆ ನೀವು ದಂಡದ ಮೊತ್ತವನ್ನು ನೀವು ಪಾವತಿಸಿದರೆ ಯಾವುದೇ ಪ್ರಕರಣ ದಾಖಲಿಸದೇ ಮುಕ್ತಾಯ ಮಾಡುತ್ತೇವೆಂದು ಹೇಳಿ ನಿಮಗೆ ಬೆದರಿಸಿ ನಿಮ್ಮಿಂದ ಹಣ ಹಾಕಿಸಿಕೊಂಡು ಮೋಸ ಮಾಡುತ್ತಾರೆ, ಪ್ರಸ್ತುತ ಡಿಜಿಟಲ್ / ಆನ್ ಲೈನ್ ಕರೆ ಮಾಡಿ ನಿಮ್ಮನ್ನು ದಸ್ತಗಿರಿ ಮಾಡುವ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಇಂತಹ ಮೋಸದ ಕರೆಗಳಿಗೆ ನೀವು ಹೆದರಿ ಹಣವನ್ನು ಕಳೆದುಕೊಳ್ಳಬೇಡಿ, ಕೂಡಲೇ 1903 ಸಹಾಯವಾಣಿಗೆ / ಹತ್ತಿರದ ಸೈಬರ್ ಪೊಲೀಸ್ ಠಾಣೆಗೆ ಸಂಪರ್ಕಿಸಿ ದೂರು ನೀಡುವುದು.
2) ಸೈಬರ್ ವಂಚಕರು ಆನ್ ಲೈನ್ ಮುಖಾಂತರ ನಿಮ್ಮನ್ನು ಸಂಪರ್ಕಿಸಿ, ನೀವು ನಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದೇ ಆದಲ್ಲಿ, ಕಡಿಮೆ ಅವಧಿಗೆ ನಿಮಗೆ ಹೆಚ್ಚಿನ ಲಾಭಾಂಶ ಮಾಡಿಕೊಡುವುದಾಗಿ ಆಸೆ ಹುಟ್ಟಿಸಿ, ಪ್ರಾರಂಭದಲ್ಲಿ ನಿಮಗೆ ಸ್ವಲ್ಪ ಲಾಭಾಂಶ ನೀಡಿದಂತೆ ಮಾಡಿ ಆನಂತರ ನಿಮ್ಮ ಬಳಿ ಹೆಚ್ಚಿನ ಹಣ ಹಾಕಿಸಿಕೊಂಡು ಹಣ ಹಿಂದಿರುಗಿಸದೇ ಮೋಸ ಮಾಡುತ್ತಾರೆ, ಆದ್ದರಿಂದ ಆನ್ ಲೈನ್ ಹೂಡಿಕೆ ಮತ್ತು ವ್ಯವಹಾರ ಮಾಡುವಾಗ ಕಂಪನಿ ಮತ್ತು ವ್ಯಕ್ತಿಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಪಡೆದು ಪರಿಶೀಲಿಸಿ ಖಾತರಿ ಪಡಿಸಿಕೊಳ್ಳಿ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಂಭಾಂಶದ ಆಸೆಗೆ ಬಿದ್ದು ಮೋಸ ಹೋಗಬೇಡಿ.
3) ವಿಧ್ಯಾರ್ಥಿಗಳು ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡುವಾಗ ಎಚ್ಚರಿಕೆ ಇಂದಿರಿ, ನಿಮ್ಮ ಖಾಸಗೀ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳ ಬೇಡಿ, ಅಪರಿಚಿತ ಫ್ರೆಂಡ್ ರಿಕ್ವೆಸ್ಟ್ ಗಳಿಗೆ ಅಕ್ಸೆಪ್ಟ್ ಮಾಡಬೇಡಿ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು, ವಿಧ್ಯಾರ್ಥಿಗಳು ಹಾಗೂ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.