ನುಡಿ ಮನೆ ಕನ್ನಡ ಸಂಘ, ಶಿ. ವೈ.ವಿ.ಸಂ. ಶಿವಮೊಗ್ಗ.೬೯ನೇ ಕನ್ನಡ ರಾಜ್ಯೋತ್ಸವ ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕನ್ನಡ ನುಡಿ ಮನೆಯಲ್ಲಿ ,ಕನ್ನಡ ನಾಡು ನುಡಿಯ ಅನನ್ಯತೆ ಕುರಿತು ಕನ್ನಡ ಕೇವಲ ಭಾಷಾವಾಚಿಕವಾಗದೆ ಎಂದು ಡಾ ತಿಮ್ಮಪ್ಪ ಹೇಳಿದರು.
ಇದೊಂದು ಅಖಂಡವಾದ ಕನ್ನಡದ ಅಸ್ಮಿತೆಯ ಸಂಭ್ರಮವಾಗಿದ್ದು ಶಾಲಾ ಕಾಲೇಜುಗಳಿಗೆ ಅಷ್ಟೇ ಸೀಮಿತವಾಗದೆ ಇದು ಒಟ್ಟು ಕನ್ನಡಿಗರ ಮನ ಮನೆಯ ಹಬ್ಬವಾಗಬೇಕಿದೆ ಈ ದೃಷ್ಠಿಯಿಂದ ಸಿಮ್ಸ್ ಶಿವಮೊಗ್ಗ ಹಮ್ಮಿಕೊಂಡಿರುವ ಕನ್ನಡದ ಈ ಸಂಭ್ರಮ ಅನ್ಯಭಾಷಿಗರ, ಅನ್ಯನಾಡಿನವರಲ್ಲಿ ಕನ್ನಡದ ಕಂಪನ್ನು, ಕನ್ನಡಿಗರ ಸಹಿಷ್ಣುತೆಯನ್ನು, ವಿಶ್ವ ಭಾತೃತ್ವವನ್ನು ಹಾಗೂ ಒಟ್ಟು ಕನ್ನಡದ ಆಶಯಗಳನ್ನು ಸರಳವಾಗಿ ಜಾನಪದ ಸಾಹಿತ್ಯದಿಂದ ವಡ್ಡಾರಾಧನೆ,ಕವಿರಾಜಮಾರ್ಗ,ಪಂಪ,ರನ್ನ,ಪೊನ್ನ,ಜನ್ನಾದಿ ಕವಿಗಳ ಕಾವ್ಯಗಳು ಮತ್ತು ಹನ್ನೆರಡನೆ ಶತಮಾನದ ವಚನಸಾಹಿತ್ಯ ನಂತರದ ದಾಸ ಸಾಹಿತ್ಯ,ಹೊಸಗನ್ನಡ ಸಾಹಿತ್ಯದಲ್ಲಿ ಮೂಡಿಬಂದಿರುವ ನಾಡು-ನುಡಿಯನ್ನು ಕಟ್ಟುವಲ್ಲಿ, ನೆಲಮೂಲದ ಆಶಯಗಳನ್ನು ಉಲ್ಲೇಖಿಸುವಲ್ಲಿ ಅವರ ಆದರ್ಶಗಳು ಆ ಮುಲಕ ಅವರ ದಾರ್ಶನಿಕತೆ ಕುರಿತು ಸುದೀರ್ಘವಾಗಿ ಕರಿಯನ್ನು ಕನ್ನಡಿಯಲ್ಲಿ ತೋರಿದಂತೆ ಡಾ ಹಾ ಮ ನಾಗಾರ್ಜನ ಪ್ರಾಧ್ಯಾಪಕರು ಸವಿಕಾಶಿ, ತಮ್ಮ ಉಪನ್ಯಾಸವನ್ನು ಮಾಡಿದರು.
ಕಾಲೇಜಿನ ನಿರ್ದೇಶಕರು ಹಾಗೂ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಡಾ ವಿರುಪಾಕ್ಷಪ್ಪ ವಿ ಅವರು ಪ್ರಸ್ತುತ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ವಿಶೇಷ ಜ್ಞಾನವನ್ನು ಬೆಳೆಸುತ್ತದೆ ಎಂದರು.ಅತಿಥಿಗಳ ಪರಿಚಯದೊಂದಿಗೆ ಕರ್ನಾಟಕ ದ ಏಕೀಕರಣ ಕುರಿತು ಜಿಲ್ಲಾ ಮುಖ್ಯ ಶಸ್ತ್ರಚಿಕಿತ್ಸಕರಾದ ಡಾ ಸಿದ್ಧನಾಡ ಗೌಡ ಪಿ ಮಾತನಾಡಿದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ ರಮೇಶ್ ನಾಯಕ್ ಸಂಘಟಿಸಿದ್ದು, ಸಿಮ್ಸ್ನ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ನಾಡು ನುಡಿ ಗೀತಾ ಗಾಯನ ಮಾಡಿ, ನಿರೂಪಿಸಿದರು.ಸಿಮ್ಸ್ನ ಎಲ್ಲ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.