ಕೇಂದ್ರೀಯ ಸೈನಿಕ ಮಂಡಳಿಯು ಭಾರತೀಯ ಸೇನೆಯ ಜೆ.ಸಿ.ಓ ರ‍್ಯಾಂಕ್‌ವರೆಗಿನ ಅಥವಾ ವಾಯು ಸೇನೆ, ನೌಕಾ ಸೇನೆಯ ತತ್ಸಮಾನ ರ‍್ಯಾಂಕ್‌ವರೆಗಿನ ಮಾಜಿ ಸೈನಿಕರ ಮಕ್ಕಳು, ದ್ವಿತೀಯ ಪಿ.ಯು.ಸಿ ಯಲ್ಲಿ ಶೇ.60 ಕ್ಕಿಂತ ಅಧಿಕ ಅಂಕಗಳನ್ನು ಪಡೆದು, ಇಂಜಿನಿಯರಿAಗ್, ಮೆಡಿಕಲ್ ಮತ್ತು ಇತರೆ ವೃತ್ತಿಪರ ಶಿಕ್ಷಣದಲ್ಲಿ ಪದವಿ ವ್ಯಾಸಂಗಕ್ಕಾಗಿ 2024-25ನೇ ಸಾಲಿನಲ್ಲಿ ಪ್ರವೇಶಾತಿ (ಅಡ್ಮಿಷನ್) ಪಡೆದು ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಪ್ರಧಾನ ಮಂತ್ರಿ ಶಿಷ್ಯವೇತನ ಯೋಜನೆ (ಪ್ರಧಾನ ಮಂತ್ರಿ ಸ್ಕಾಲರ್ಷಿಪ್ ಸ್ಕೀಂ) ಎಂಬ ಶೀರ್ಷಿಕೆಯಡಿ ಶಿಷ್ಯವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಆಸಕ್ತರು ಜಾಲತಾಣ HTTPS://ONLINE.KSB.GOV.IN ರಲ್ಲಿ ನ. 30 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಡಾ. ಸಿ.ಎ. ಹಿರೇಮಠರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಯ ಸೈನಿಕ ಮಂಡಳಿಯ ಜಾಲತಾಣ HTTPS://ONLINE.KSB.GOV.IN ವನ್ನು ಅಥವಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಇವರ ದೂ. ಸಂ.: 08182-220925 ನ್ನು ಸಂಪರ್ಕಿಸುವುದು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *