ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.ಯುವ ಕಾಂಗ್ರೆಸ್ ನ ಹೋರಾಟದ ಫಲಶ್ರುತಿಯಾಗಿ  ಲಂಚಕ್ಕೆ ಬೇಡಿಕೆ ಇಟ್ಟ ಪಾಲಿಕೆ ಕಂದಾಯ ವಿಭಾಗದ ಉಪ ಆಯುಕ್ತರ ಮಂಜುನಾಥ್ ರವರನ್ನು ಎತ್ತಂಗಡಿ ಮಾಡಿದೆ. ಆ ಸ್ಥಳಕ್ಕೆ ಪೂಜಾರ್ ರವರನ್ನು ಪಾಲಿಕೆ  ಆಯುಕ್ತರು ನೇಮಿಸಿದ್ದಾರೆ.

ಕೆಲವು ದಿನಗಳಿಂದ E ಸ್ವತ್ತು ವಿಷಯವಾಗಿ ಕಂದಾಯ ಉಪ ಆಯುಕ್ತರದ ಮಂಜುನಾಥ್ ರವರು ಒಂದು E ಸ್ವತುಗೆ ಸಾವಿರಾರು ಹಣ ಪಡೆಯುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಕಚೇರಿ ಸಮಯದಲ್ಲಿ ಸಾರ್ವಜನಿಕರು ಹೋದರೆ ಅಧಿಕಾರಿ ಸಿಗುತ್ತಿರಲಿಲ್ಲ ಎಂದಿದ್ದಾರೆ.ಜೊತೆಗೆ ನಿನ್ನೆ ದಿವಸ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಇ -ಆಸ್ತಿ ವಿಚಾರವಾಗಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರಿಗೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಅಧಿಕಾರಿಯ ವಿರುದ್ಧ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು.

ತತ್ತಕ್ಷಣವೇ ಪಾಲಿಕೆಯ ಆಯುಕ್ತರು ಎಚ್ಚೆತ್ತು ಕಂದಾಯ ವಿಭಾಗದ ಉಪ ಆಯುಕ್ತ ರನ್ನು ತೆರವು ಮಾಡಿ ಆದೇಶ ಹೊರಡಿಸಿದ್ದಾರೆ.ಯುವ ಕಾಂಗ್ರೆಸ್ ತಂಡಕ್ಕೆ ಜಯ ಸಿಕ್ಕಿದೆ.