ಕನ್ನಡಪರ ಸಂಘಟನೆಗಳು ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆ ಸರಿಪಡಿಸಬೇಕೆಂದು ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಪಲವಾಗಿ ಹೊನ್ನಾಳಿ ರಸ್ತೆಯ ಚೌಡೇಶ್ವರಿ ದೇವಸ್ಥಾನದ ಎದುರಿನ ರಸ್ತೆ ಅಂತು ಇಂತು ಡಾಂಬರೀಕರಣಗೊಂಡಿದೆ. ಕನ್ನಡ ಹೋರಾಟಗಾರರ ತೀವ್ರತರನಾದ ಪ್ರತಿಭಟನೆಯ ನಡುವೆ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆ ಡಾಂಬರ್ ಕೆಲಸ ಆಗಿದೆ.

ಡಾಂಬರೀಕರಣದ ರಸ್ತೆಯನ್ನು ಲೋಕೋಪಯೋಗಿ ವತಿಯಿಂದ ನಿರ್ಮಾಣ ಮಾಡಿದ್ದಷ್ಟೇ ಅಲ್ಲದೆ ಹಲವು ಭಾಗಗಳಲ್ಲಿ ಗುಂಡಿಯನ್ನು ಮುಚ್ಚುವ ಕೆಲಸವು ಕೂಡ ಆಗಿದೆ. ಇದರಿಂದ ದೂಳಿನಲ್ಲಿಯೇ ಜೀವನ ಕಳೆಯ ಬೇಕಿದ್ದ ಇಲ್ಲಿನ ಸ್ಥಳೀಯ ನಿವಾಸಿಗಳಿಂದ ಅಭಿನಂದನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕನ್ನಡಪರ ಸಂಘಟನೆಗೆ ಸಂದ ಜಯವಾಗಿದೆ.


ಡಾಂಬರೀಕರಣಕ್ಕೆ ಕನ್ನಡ ಹೋರಾಟಗಾರರ ಸಂಘಟನೆಯ ಮಧುಸೂದನ್ ಎಸ್ಎಂ , ರವಿಪ್ರಸಾದ್ ನಯಾಜ್ ನೂರುಲ್ಲಾ ನೇತೃತ್ವದಲ್ಲಿ ನಿನ್ನೆ ಪ್ರತಿಭಟನೆ ನಡೆದಿತ್ತು. ಇಲಾಖೆ ಅಧಿಕಾರಿಯಾದ ಬರಮಪ್ಪ ಅವರಿಗೆ ದೂರವಾಣಿ ಕರೆ ಮಾಡಿದ ಹೋರಾಟಗಾರರು ಸ್ಪಂದನೆಗೆ ಸಹಕಾರಿ ಆಗಿದ್ದಕ್ಕೆ ಧನ್ಯವಾದಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *