ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂಕದಹೊಳೆ ಗ್ರಾಮದ ಸಮೀಪ ನದಿಯಲ್ಲಿ ವ್ಯಕ್ತಿಯೊಬ್ಬರ ಶವ ತೇಲುತ್ತಿದೆ ಎಂದು ERSS-112 ಗೆ ಸಾರ್ವಜನಿಕರಿಂದ ಕರೆಬಂದ ಮೇರೆಗೆ ERV ವಾಹನದ ಅಧಿಕಾರಿಗಳಾದ 1) ಲೋಕೇಶ್, AHC-50, ಡಿಎಆರ್, ಶಿವಮೊಗ್ಗ ಮತ್ತು 2) ಸಾದತ್, CPC-1868, ಆಗುಂಬೆ ಪೊಲೀಸ್ ಠಾಣೆ ರವರು ಕೂಡಲೇ ಕಾರ್ಯಪ್ರೌವೃತ್ತರಾಗಿ ಸ್ಥಳಕ್ಕೆ ಹೋಗಿ ನೋಡಿದಾಗ ನದಿಯ ನೀರಿನಲ್ಲಿ ವ್ಯಕ್ತಿಯೊಬ್ಬನು ತೇಲುತ್ತಿದ್ದು, ಪರಿಶೀಲಿಸಲಾಗಿ ಆತನು ಇನ್ನೂ ಜೀವಂತನಾಗಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿರುತ್ತಾನೆ
.ಕೂಡಲೇ ವ್ಯಕ್ತಿಯನ್ನು ನದಿಯ ನೀರಿನಿಂದ ಎತ್ತಿಕೊಂಡು ಸುಮಾರು 01 ಕಿ.ಮಿ ನಷ್ಟು ನದಿಯ ನೀರಿನಲ್ಲಿಯೇ ನಡೆದುಕೊಂಡು ಬಂದು ನದಿಯ ದಡಕ್ಕೆ ತಂದು, ಆತನಿಗೆ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ERSS-112 ವಾಹನದಲ್ಲಿ ತೀರ್ಥಹಳ್ಳಿಯ ಶ್ರೀಜಯಚಾಮರಾಜೇಂದ್ರ ಆಸ್ಪತ್ರೆಗೆ ತಂದು ದಾಖಲಿಸಿ, ವ್ಯಕ್ತಿಯ ಜೀವ ಉಳಿಸಿರುತ್ತಾರೆ. ERSS 112 ಅಧಿಕಾರಿಗಳ ಉತ್ತಮ ಕರ್ತವ್ಯವನ್ನು
ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು, ಪ್ರಶಂಸಿಸಿ ಅಭಿನಂದಿರುತ್ತಾರೆ.