ಭಾರತೀಯ ಜನತಾ ಪಕ್ಷ ಶಿಕಾರಿಪುರ ಮಂಡಲ ಪಟ್ಟಣದ ಮಂಗಳ ಭವನ ಹಿಂಭಾಗದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಂಘಟನಾ ಪರ್ವ ಸಮಾಲೋಚನಾ ಸಭೆ ಹಾಗೂ ಬೂತ್ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಅಭಿನಂದನಾ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉದ್ಘಾಟಿಸಿದರು.
ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಮತ್ತು ಮಂಡಲದ ಎಲ್ಲಾ ಪ್ರಮುಖ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸೇರಿದ್ದ ಸಾವಿರ ಸಂಖ್ಯೆಯ ದೈವದುರ್ಲಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಪಟ್ಟಿಯನ್ನು ತೆರೆದಿಟ್ಟು ಭವಿಷ್ಯದ ಉತ್ತಮ ದಿನಗಳ ಬರುವಿಕೆಯ ಕುರಿತು ಆತ್ಮವಿಶ್ವಾಸದ ನುಡಿಯನ್ನು ವ್ಯಕ್ತಪಡಿಸಲಾಯಿತು.
ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ಪಕ್ಷದ ಸದಸ್ಯತ್ವ ಅಭಿಯಾನ ಅತ್ಯಂತ ಯಶಸ್ವಿಯಾಗಿ ಮುನ್ನೆಡೆಯುತ್ತಿದೆ. ಇದು ಪಕ್ಷದ ಮೇಲಿನ ಪ್ರಜೆಗಳ ಆತ್ಮವಿಶ್ವಾಸ ಹಿಮ್ಮಡಿಗೊಳಿಸಿದೆ. ಈ ಬೆಳವಣಿಗೆ ಸಂಘಟನಾ ಪರ್ವಕ್ಕೆ ಹೊಸ ಹುರುಪು ತುಂಬಿದೆ ಎಂದು ಹೇಳಲು ಸಂತಸವಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಪದ್ಮನಾಭ ಭಟ್ ಅವರು, ಶ್ರೀ ಗುರುಮೂರ್ತಿ ಅವರು, ಶ್ರೀ ಕೊಳಗಿ ರೇವಣಪ್ಪ ಅವರು, ಪ್ರಮುಖರಾದ ಶ್ರೀ ಮೇಘರಾಜ್ ಅವರು, ಶ್ರೀ ಹನುಮಂತಪ್ಪ ಅವರು, ಶ್ರೀ ಸಿದ್ಧಲಿಂಗಯ್ಯ ಅವರು, ಶ್ರೀಮತಿ ಗಾಯತ್ರಿ ಮಲ್ಲಪ್ಪ ಅವರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.