ನಗರದ ಪ್ರತಿಷ್ಠಿತ ಕರ್ನಾಟಕ ಸಂಘ ಭವನದಲ್ಲಿ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಘದ ೯೪ನೇ ವಾರ್ಷಿಕೋತ್ಸವ ನಿಮಿತ್ತ ನ. ೨೨ ಮತ್ತು ೨೩ರಂದು ಸಂಜೆ ೫.೩೦ರಿಂದ ರಾತ್ರಿ ೯ರವರೆಗೆ ಪ್ರಖ್ಯಾತ ವೈದ್ಯರು, ವನ್ಯಜೀವಿ ಛಾಯಾಚಿತ್ರ ಗ್ರಾಹಕರೂ ಆದ ಡಾ| ಶ್ರೀಕಾಂತ್ ಹೆಗಡೆ ಅವರ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಹಿರಿಯ ಪತ್ರಕರ್ತ ಶಿವಮೊಗ್ಗ ಟೈಮ್ಸ್ ಪತ್ರಿಕೆ ಸಂಪಾದಕರೂ ಆದ ಎಸ್. ಚಂದ್ರಕಾಂತ್ ಅವರ ಅಪೂರ್ವ ರಾಜ ಮಹಾರಾಜರ ಕಾಲದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು, ಭಾರತದ ರಾಜಪ್ರಭುತ್ವ ರಾಜರ ಅಂಚೆಚೀಟಿಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.


ನ. ೨೨ರ ಶುಕ್ರವಾರ (ನಾಳೆ) ಸಂಜೆ ೫.೩೦ಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಈ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಅಂದು ಸಂಜೆ ೬.೩೦ಕ್ಕೆ ಆಧುನಿಕ ಕನ್ನಡ ಗದ್ಯ ಬರವಣಿಗೆಯ ಹೆಜ್ಜೆಗಳು ವಿಷಯ ಕುರಿತು ಡಾ| ಜನಾರ್ದನ ಭಟ್‌ರಿಂದ ಉಪನ್ಯಾಸವಿದೆ.
ನ. ೨೩ರ ಸಂಜೆ ೫.೩೦ಕ್ಕೆ ಕರ್ನಾಟಕ ಸಂಘದ ೯೪ನೇ ವಾರ್ಷಿಕೋತ್ಸವ ಜರುಗಲಿದ್ದು, ಖ್ಯಾತ ಚಲನಚಿತ್ರ ನಿರ್ದೇಶಕ ಡಾ| ಟಿ.ಎಸ್. ನಾಗಾಭರಣ ಅತಿಥಿUಳಾಗಿ ಪಾಲ್ಗೊಳ್ಳಲಿದ್ದಾರೆ.
ಡಾ| ಶ್ರೀಕಾಂತ್ ಎನ್. ಹೆಗಡೆ ಅವರು ಕಳೆದ ೧೫ ವರ್ಷಗಳಿಂದ ವನ್ಯಜೀವಿಗಳ ಫೋಟೋಗ್ರಫಿ ಯಲ್ಲಿ ತೊಡಗಿದ್ದು, ಇದನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದಾರೆ. ಅಪರೂಪದ ಪಕ್ಷಿಗಳನ್ನು ಇವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.

ಒಂದಕ್ಕೊಂದು ಮಿಗಿಲಾದ ವನ್ಯಜೀವಿ ಪಕ್ಷಿಗಳ ಛಾಯಾಚಿತ್ರ ವೀಕ್ಷಿಸಲು ಇದೊಂದು ಸದವಕಾಶ ವಾಗಿದೆ. ಹಾಗೆಯೇ ಎಸ್. ಚಂದ್ರಕಾಂತ್ ಅವರು ಕಳೆದ ೫೦ ವರ್ಷಗಳಿಂದ ಸಂಗ್ರಹಿಸಿರುವ ಕುಶಾನರು, ಗುಪ್ತರು, ಕ್ಷತ್ರಪರು, ವಿಜಯ ನಗರ, ಮೈಸೂರು, ಶಾತ ವಾಹನರು, ಬನವಾಸಿಯ ಚುಟು ವಂಶಸ್ಥರು, ಚಾಣಕ್ಯರ ಮಾರ್ಗದರ್ಶನದಲ್ಲಿ ಮೌರ್‍ಯರ ಆಡಳಿತದಲ್ಲಿ ಭಾರತದಲ್ಲಿ ಬಳಕೆಗೆ ಬಂದ ಬೆಳ್ಳಿಯ ಪಂಚ್‌ಮಾರ್ಕ್ ನಾಣ್ಯಗಳು ಹೀಗೆ ದೇಶವನ್ನಾಳಿದ ರಾಜ-ಮಹಾರಾಜರ ಕಾಲದ ನಾಣ್ಯಗಳು ಹಾಗೂ ಭಾರತದಲ್ಲಿ ೫೦೦ಕ್ಕೂ ಹೆಚ್ಚು ರಾಜರು ತಮ್ಮತಮ್ಮದೇ ಪ್ರತ್ಯೇಕ ರಾಜ್ಯಗಳನ್ನು ಹೊಂದಿದ್ದು, ಈ ಸಂದರ್ಭದಲ್ಲಿ ಅವರು ಬಳಸುತ್ತಿದ್ದ ವಿಶೇಷ ಅಂಚೆಚೀಟಿಗಳು ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದೆ.

ಬ್ರಿಟೀಷರ ಆಳ್ವಿಕೆ ಕಾಲದಲ್ಲಿ ಚಲಾವಣೆ ಯಲ್ಲಿದ್ದ ಬೆಳ್ಳಿ ನಾಣ್ಯಗಳು, ಕಾಸು, ಬಿಲ್ಲೆ, ಅರ್ಧಾಣೆ, ಒಂದಾಣೆ, ನಾಲ್ಕಾಣೆ, ಎಂಟಾಣೆ ನಾಣ್ಯಗಳೂ ಸೇರಿದಂತೆ ಅಪರೂಪದ ನಾಣ್ಯಗಳ ಪ್ರದರ್ಶನ ಸಹ ಇದ್ದು ಶಿವಮೊಗ್ಗೆಯ ಜನತೆ ನಾಳೆ ಮತ್ತು ನಾಡಿದ್ದು ಸಂಜೆಯಿಂದ ಕರ್ನಾಟಕ ಸಂಘ ಭವನದಲ್ಲಿ ವೀಕ್ಷಿಸುವಂತೆ ಅಧ್ಯಕ್ಷ ಪ್ರೊ| ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ, ಉಪಾಧ್ಯಕ್ಷ ಮೋಹನ ಶಾಸ್ತ್ರಿ, ಕಾರ್ಯದರ್ಶಿ ವಿನಯ್ ಶಿವಮೊಗ್ಗ ಅವರು ಕೋರಿದ್ದಾರೆ.

Leave a Reply

Your email address will not be published. Required fields are marked *