ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪನವ ರಾಯಣ್ಣ ಬ್ರಿಗೇಡ್ ಎಂದು ಹೆಸರಿನ ಅಡಿ ಈ ಹಿಂದೆ ನಾಮಕರಣಗೊಂಡಿದ್ದ ಬ್ರಿಗೇಡ್ ಈಗ ಕ್ರಾಂತಿ ವೀರ ಬ್ರಿಗೇಡ್ ಎಂಬ ಹೆಸರಿನ ಅಡಿಯಲ್ಲಿ ಹೊರಬೀಳುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿರೀಕ್ಷೆಗೂ ಮೀರಿ ಕ್ರಾಂತಿ ವೀರ ಬ್ರಿಗೇಡ್ ಗೆ ಜನ ಸೇರಲು ತುದಿಗಾಲಿನಲ್ಲಿರುವುದಾಗಿ ಮಾಜಿ ಡಿಸಿಎಂ ಈಶ್ವರಪ್ಪ ತಿಳಿಸಿದ್ದು, ಇದನ್ನ ಫೆ.04 ರಂದು ಬಸವನ ಬಾಗೇವಾಡಿಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ, 1000 ಜನ ಸಾಧುಸಂತರ ಕಾಲು ತೊಳೆಯುವ ಮೂಲಕ ಲೋಕರ್ಪಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬ್ರಿಗೇಡ್ ಸಮಿತಿ ಡಿ.2 ರಂದು ನಡೆಯಲಿದೆ. ಸಮಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ನಡೆಯಲಿದೆ. ಅದನ್ನ ಫೆ.4 ರಥಸಪ್ತಮಿ ದಿನ ಲೋಕಾರ್ಪಣೆಗೊಳಿಸಿ ಅಲ್ಲಿಂದ ಬ್ರಿಗೇಡ್ ನ ಕಾರ್ಯಕ್ಷಮತೆ ಆರಂಭವಾಗಲಿದೆ ಎಂದರು.