ಶ್ರೀ ಜೆ. ಆರ್. ಎಫ್ ಮಿರಾಂಡಾ, ಪಿ.ಎಸ್.ಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, ಶ್ರೀ ವಿ ಎನ್ ಪುಟ್ಟು ಸಿಂಗ್, ಎ.ಎಸ್.ಐ, ಜಿಲ್ಲಾ ಪೊಲೀಸ್ ಕಛೇರಿ ಶಿವಮೊಗ್ಗ, ಶ್ರೀ ಚಂದ್ರಪ್ಪ ಜಿ. ಎಸ್, ಎ.ಆರ್.ಎಸ್.ಐ, ಡಿಎಆರ್, ಶಿವಮೊಗ್ಗ ರವರು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿ
ವಯೋನಿವೃತ್ತಿಯನ್ನು ಮತ್ತು ಶ್ರೀ ಕೋಮಲಾಚಾರ್, ಪಿ.ಎಸ್.ಐ ಶಿಕಾರಿಪುರ ಟೌನ್ ಪೊಲೀಸ್ ಠಾಣೆರವರು ಸ್ವಯಂ ನಿವೃತ್ತಿಯನ್ನು ಹೊಂದಿದ್ದು ಇವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿ ಬೀಳ್ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಅರುಣ್ ಮತ್ತು ಶ್ರೀ ಎಂ ಎಂ ಮಾಳಗಿ ಶಾಖಾಧೀಕ್ಷಕರು ಜಿಲ್ಲಾ ಪೊಲೀಸ್ ಕಛೇರಿ ಶಿವಮೊಗ್ಗ ರವರು ಉಪಸ್ಥಿತರಿದ್ದರು.
