ನಗರದ ಪೋಲೀಸ್ ಚೌಕಿ ಹತ್ತಿರ “ಸುವರ್ಣ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘ, ಶಿವಮೊಗ್ಗ ಇವರ ವತಿಯಿಂದ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಯಿತು.

ಸದರಿ ಕಾರ್ಯಕ್ರಮಕ್ಕೆ ಸಂಘದ ಪದಾಧಿಕಾರಿಗಳು, ಕಾರ್ಮಿಕರು ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸಿ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಗುರುತಿನ ಚೀಟಿ ಹಾಗೂ ಧನಸಹಾಯಗಳ ಮಂಜೂರಾತಿ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಿಗೇನಹಳ್ಳಿ ರಾಜಪ್ಪ ವಹಿಸಿಕೊಂಡು ಕಾರ್ಮಿಕರು ಇಲಾಖೆಯಿಂದ ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪ್ಸರ್ ಬಾಷ, ಪ್ರಧಾನ ಕಾರ್ಯದರ್ಶಿ, ಅಶೋಕ್ ಗ್ರಾಮಾಂತರ ಅಧ್ಯಕ್ಷರು, ವಿಶ್ವನಾಥ್, ನಗರ ಸಂಚಲಕರು ಶ್ರೀಕಾಂತ್ ಉಪಾಧ್ಯಕ್ಷರು, ರಮೇಶ್ ಕಾರ್ಯದರ್ಶಿ, ಕಿರಣ್ ನಗರ ಅಧ್ಯಕ್ಷರು, ಹನುಮಂತಪ್ಪ, ನಗರ ಕಾರ್ಯದರ್ಶಿ, ಸಿದ್ದೀಕ್ ಉಲ್ಲಾ ಗ್ರಾಮಾಂತರ ಕಾರ್ಯದರ್ಶಿ, ರಮೇಶ್ ಎಸ್, ಗ್ರಾಮಾಂತರ ಸಂಚಲಕರು, ಶಶಿಕುಮಾರ್ ನಿರ್ದೇಶಕರು ಹಾಗೂ ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿರಿದ್ದರು.

Leave a Reply

Your email address will not be published. Required fields are marked *