ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಡಾ.ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಡಾ ||ಧನಂಜಯ್ ಸರ್ಜಿ, ಶಾಸಕರು ವಿಧಾನ ಪರಿಷತ್ ಹಾಗೂ ಛೆರ್ಮನ್ ಸರ್ಜಿ ಸಮೂಹ ಸಂಸ್ಥೆ ಶಿವಮೊಗ್ಗ ಇವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಅರ್ಹ ಫಲಾನುಭವಿಯನ್ನು ಗುರುತಿಸಿ ಜೀವನಕ್ಕೆ ಆಧಾರ ವಾಗುವಂತಹ ಕಾರ್ಯಕ್ರಮವನ್ನು ಮಾಡುತ್ತಿರುವುದು ಶ್ಲಾಘನೀಯ. ಸರ್ಕಾರ ಮಾಡಲಾಗದ ಕೆಲಸವನ್ನು ಪೂಜ್ಯರು ಮಾಡಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಿದೆ. ಆಡುಮಟ್ಟಿದ್ ಮುಟ್ಟದ ಸೊಪ್ಪಿಲ್ಲ ಪರಮಪೂಜ್ಯರು ನಡೆಸದ ಕಾರ್ಯಕ್ರಮವಿಲ್ಲ ಎಂದು ತಿಳಿಸಿದರು.
ಮಹಿಳೆಯರ ಆರೋಗ್ಯ ರಕ್ಷಣೆ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾಕ್ಟರ್ ಹಾಲಮ್ಮ ಮುದ್ದುಕೃಷ್ಣ ಸಹಪ್ರಾಧ್ಯಾಪಕರು ಮತ್ತು ಸಂಶೋಧನಾ ಮಾರ್ಗದರ್ಶಕರು ಸಹ್ಯಾದ್ರಿ ಕಲ ಕಾಲೇಜ್ ಶಿವಮೊಗ್ಗ ಇವರು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಮಹತ್ವದ ಕುರಿತು ವಿಚಾರಧಾರೆಯನ್ನು ಮಂಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುವಂತ ಶ್ರೀಯುತ ಮುರಳೀಧರ್ ಕೆ ಶೆಟ್ಟಿ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಿ ಸಿ ಟ್ರಸ್ಟ್ ಶಿವಮೊಗ್ಗ ಇವರು ಜ್ಞಾನವಿಕಾಸ ಕಾರ್ಯಕ್ರಮದ, ಚಟುವಟಿಕೆಗಳ ಕುರಿತು, ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯಗಳನ್ನು, ಯೋಜನೆಯ ಇತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಶ್ರೀಮತಿ ಮಂಜಮ್ಮ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಮಹಿಳಾ ಪೊಲೀಸ್ ಠಾಣೆ ದೊಡ್ಡಪೇಟೆ ಇವರು ಪೊಲೀಸ್ ಇಲಾಖೆಯಲ್ಲಿ ಮಹಿಳೆಗೆ ಇರುವ ಸಹಕಾರಗಳ ಕುರಿತು, ಪೋಕ್ಸೋ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು.
ಶ್ರೀಮತಿ ಶಶಿರೇಖಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ಇಲಾಖೆಯಲ್ಲಿ ಮಹಿಳೆಗೆ ಇರುವಂತ ಸೌಲಭ್ಯಗಳ ಕುರಿತು, ದತ್ತು ಸ್ವೀಕಾರದ ಕುರಿತು, ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಪುಷ್ಪ ಎಸ್ ಶೆಟ್ಟಿ ಸದಸ್ಯರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಶಿವಮೊಗ್ಗ ಇವರು ಕಾರ್ಯಕ್ರಮದ ಉದ್ದೇಶಗಳ ಕುರಿತು ಮಾಹಿತಿ ನೀಡಿದರು.
ಶ್ರೀಧ ಉಮೇಶ್ ಕೆ ಯೋಜನಾಧಿಕಾರಿಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಶಿವಮೊಗ್ಗ ಕಾರ್ಯಕ್ರ ದಲ್ಲಿ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಆಕರ್ಷಣೀಯವಾಗಿ ರಂಗೋಲಿ ಪುಷ್ಪಗುಚ್ಛ ಹಾಗೂ ಆರತಿ ತಟ್ಟೆ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ 10 ಜನ ಸಾಧಕ ಮಹಿಳೆಯರಿಗೆ ಅಭಿನಂದಿಸಲಾಯಿತು. ಬತ್ತಿ ಘಟಕ ಸ್ವಉದ್ಯೋಗವನ್ನು ನಡೆಸುತ್ತಿರುವ ಶಾಲಿನಿ, ಹಾರ್ಡ್ವೇರ್ ಅಂಗಡಿಯನ್ನು ನಡೆಸುತ್ತಿರುವ ಮಾಲಾ, ಸ್ವಾವಲಂಬಿ ಮಹಿಳೆಯಾಗಿ ಬದುಕನ್ನ ನಡೆಸುತ್ತಿರುವ ನೇತ್ರಾವತಿ, ಫೋಟೋ ಸ್ಟುಡಿಯೋ ನಿರ್ವಹಿಸುತ್ತಿರುವ ಮಮತಾ, ನಡೆಸುತ್ತಿರುವ ಶ್ರೀಮತಿ ಸರಸ್ವತಿ, ಸ್ವಾವಲಂಬಿ ಮಹಿಳೆಯಾಗಿರುವ ರಜಿನಿ, ಹೈನುಗಾರಿಕೆಯನ್ನ ನಡೆಸುತ್ತಿರುವ ಶಹೀನ, ಕ್ಯಾಂಟೀನ್ ಅನ್ನು ನಡೆಸುತ್ತಿರುವ ಶ್ರೀಮತಿ ರೂಪ ರಾಣಿ, ಗ್ಯಾಸ್ ಕೂಡ ನನ್ನ ನಡೆಸುತ್ತಿರುವ ಶ್ರೀಮತಿ ಕವಿತಾ ಇವರನ್ನು ಸನ್ಮಾನಿಸಲಾಯಿತು.
ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಶೌಚಾಲಯ ರಿಪೇರಿಯನ್ನ ಮಾಡಿರುವ ಶ್ರೀಮತಿ ರತ್ನಮ್ಮ ಅವರಿಗೆ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.
ಶ್ರೀಮತಿ ಕಾಶಿ ಅಮ್ಮ ಹಾಗೂ ಶ್ರೀನಿವಾಸ್ ಇವರಿಗೆ ಒಂದು ಸಾವಿರ ರೂಪಾಯಿ ಮಾಶಾಸನ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 800 ಜನ ಜ್ಞಾನವಿಕಾಸ ಕೇಂದ್ರದ ಸದಸ್ಯರು ಪಾಲ್ಗೊಂಡಿದ್ದರು. ಮಿಡಿದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.