ಅಮೃತ ಅನ್ನದಾಸೋಹ ಪ್ರತಿಷ್ಠಾನದಿಂದ ನಡೆಸಿಕೊಂಡು ಬರುತ್ತಿರುವ ಅನ್ನದಾಸೋಹ ಯಶಸ್ವಿಯಾಗಿ 25 ಆವೃತ್ತಿಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರಾದ ಡಾ ಸತೀಶ್ ಕುಮಾರ್ ಶೆಟ್ಟಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.


ಪ್ರತಿಷ್ಠಾನದ ದಾಸೋಹ ಕೈಂಕರ್ಯಕ್ಕೆ ಉದಾರ ಮನಸ್ಸಿನಿಂದ ಸಹಾಯ ಹಸ್ತ ಚಾಚಿದ ದಾನಿಗಳಿಗೆ, ಪ್ರವರ್ತಕರಿಗೆ ಮತ್ತು ಈ ದಾಸೋಹದ ಪ್ರಯೋಗ ಶಿವಮೊಗ್ಗ ನಗರದಲ್ಲಿ ಪ್ರಶಂಸೆ ಮತ್ತು ಕೃತಜ್ಞತೆಗಳಿಗೆ ಒಳಪಟ್ಟು ನಿರಂತರವಾಗಿ ಯಶಸ್ವಿಯಾಗಿ ಸಾಗಲು ಸಹಕರಿಸುತ್ತಿರುವ ಪ್ರತಿಷ್ಠಾನದ ಎಲ್ಲಾ ಕಾರ್ಯಕರ್ತರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ನಮ್ಮ ಪ್ರತಿಷ್ಠಾನಕ್ಕೆ 25 ಒಂದು ಸಾಧನೆಯ ಗುರುತು. ಈ ಗುರುತನ್ನು ಸದಾ ನೆನಪಾಗಿಸಲು ದಿನಾಂಕ: 11.12.2024 ರ ಬುಧವಾರ 11:45 ಕ್ಕೆ ಅರ್ಧ ಗಂಟೆಗಳ ಒಂದು ಚಿಕ್ಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ತಮ್ಮೆಲ್ಲರನ್ನು ಈ ಕಾರ್ಯಕ್ರಮಕ್ಕೆ ಹೃತ್ಪೂರ್ವಕವಾಗಿ ಆಹ್ವಾನಿಸ್ತೇವೆ.

ತಮ್ಮ ಆಗಮನದ ನಿರೀಕ್ಷೆಯಲ್ಲಿ…

ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ,
ಅಮೃತ ಅನ್ನದಾಸೋಹ ಪ್ರತಿಷ್ಠಾನ, ಶಿವಮೊಗ್ಗ

Leave a Reply

Your email address will not be published. Required fields are marked *