ಸುವರ್ಣ ಕಟ್ಟಡ ಮತ್ತು ಕಾರ್ಮಿಕ ಸೇವಾ ಸಂಘದ ವತಿಯಿಂದ ವಿವಿಧ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಕಾರ್ಮಿಕ ಕೊಟ್ರೇಶ ರವರು ಹರಕೆರೆ ವಾಸಿ ಸೆಂಟ್ರಿಂಗ್ ಕಾರ್ಮಿಕ ಮುನ್ನರವರ ಕೆಲಸ ಮಾಡುವಾಗ ಆಕಸ್ಮಿಕವಾಗಿ ಬಿದ್ದು ಅವರ ಎರಡು ಕೈಗಳು ಸ್ವಾಧೀನ ಕಳೆದುಕೊಂಡಿದ್ದು ಅವರ ಮನೆ ಪರಿಸ್ಥಿತಿ ತುಂಬ ಶೋಚನೀಯವಾಗಿದೆ ಎಂದು ತಿಳಿಸಿದಾಗ ಸಂಘದ ವತಿಯಿಂದ ಎರಡು ತಿಂಗಳಿಗೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ನೀಡಿ ಮನೆ ಮಾಲೀಕ/ಮೇಸ್ತ್ರೀ ಯವರಿಗೆ ಚಿಕಿತ್ಸಾವೆಚ್ಚ ಭರಿಸುವಂತೆ ಇಲ್ಲವಾದಲ್ಲಿ ಸಂಘಟನೆ ವತಿಯಂದ ಕಾನೂನಾತ್ಮಕ ಹೋರಟದ ಎಚ್ಚರಿಕೆಯನ್ನು ನೀಡಲಾಯಿತು.
ಈ ಸಂದರ್ಬದಲ್ಲಿ ರಾಜಪ್ಪ ಮಲ್ಲಿಗೇನಹಳ್ಳಿ, ಅಧ್ಯಕ್ಷರು, ಅಪ್ಸರ್ ಬಾಷ, ಪ್ರಧಾನ ಕಾರ್ಯದರ್ಶಿ, ಅಶೋಕ್ ಗ್ರಾಮಾಂತರ ಅಧ್ಯಕ್ಷರು, ವಿಶ್ವನಾಥ್, ನಗರ ಸಂಚಲಕರು, ಬಸವರಾಜಪ್ಪ, ನೇಮತ್, ಯೋಹಾನ್ ಪ್ರಸನ್ನ. ಮತ್ತಿತರು ಹಾಜರಿದ್ದರು.