ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವುದರಿಂದ ಲೋಕಾಯುಕ್ತದಲ್ಲಿ ದಾಖಲಾಗುತ್ತಿರುವ ಮೊಕದ್ದಮೆಗಳ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಇವುಗಳನ್ನು ಸಕಾಲದಲ್ಲಿ ಇತ್ಯರ್ಥಗೊಳಿಸಲು ಅಗತ್ಯವಾಗಿರುವ ಸಮರ್ಥ ಹಾಗೂ ನುರಿತ ಅಧಿಕಾರಿ – ಸಿಬ್ಬಂದಿಗಳನ್ನು ಕೊರತೆ ಇದ್ದು ಅವುಗಳನ್ನು ತ್ವರಿತವಾಗಿ ತುಂಬಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಸ್ಟೀಸ್ ಉಪಲೋಕಾಯುಕ್ತ ಕೆ. ಎನ್. ಫಣಿoದ್ರ ಅವರು ಹೇಳಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಲೋಕಾಯುಕ್ತಕ್ಕೆ ನೇಮಿಸಿಕೊಳ್ಳುವ ಸಿಬಿಐ ನಂತಹ ದಕ್ಷ ಅಧಿಕಾರಿಗಳ ಜೊತೆಗೆ ನಿವೃತ್ತ ಸೇನಾಧಿಕಾರಿಗಳನ್ನು ನೇಮಿಸಿಕೊಂಡಲ್ಲಿ ಲೋಕಾಯುಕ್ತಕ್ಕೆ ಇನ್ನಷ್ಟು ಬಲ ಬರುವ ಆಶಯ ತಮಗಿರುವುದಾಗಿ ತಿಳಿಸಿದ ಅವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕೊರಿರುವುದಾಗಿ ತಿಳಿಸಿದರು.

ರಾಜ್ಯದ ಕಲಬುರಗಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಲೋಕಾಯುಕ್ತದ ವಿಭಾಗಿಯ ಕಚೇರಿಗಳನ್ನು ಆರಂಭಿಸಬೇಕಲ್ಲದೆ ಇನ್ನೂ ಇಬ್ಬರು ಹೆಚ್ಚುವರಿಯಾಗಿ ಉಪಲೋಕಾಯುಕ್ತರನ್ನು ನೇಮಿಸಿಕೊಳ್ಳಬೇಕಾದ ಅಗತ್ಯವಿದೆ. ಇದರಿಂದಾಗಿ ಪ್ರಕರಣಗಳ ತ್ವರಿತ ಇತ್ಯಾರ್ಥಕ್ಕೆ ಅನುಕೂಲವಾಗಲಿದೆ ಎಂದರು.

ಅನೇಕ ಕಾರಣಗಳಿಂದಾಗಿ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ನಿರೀಕ್ಷಿಸಿದಷ್ಟಿಲ್ಲ. ಅಲ್ಲದೆ ದಾಖಲಾಗುವ ಪ್ರಕರಣಗಳಲ್ಲಿನ ಸ್ವರೂಪವು ಬದಲಾವಣೆಯಾಗುತ್ತಿರುವುದು ಕಾರಣವಾಗಿದೆ. ಅದಕ್ಕಾಗಿ ವಿದ್ಯುನ್ಮಾನ್ ಸಾಕ್ಷ್ಯಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಇಲ್ಲಿಯೂ ಕೆಲವು ಸಂದರ್ಭಗಳಲ್ಲಿ ಅದರ ಸಮರ್ಥನೆ ಸಾಧ್ಯವಾಗುವುದಿಲ್ಲ. ಆದ್ದರಿಂದ ವಿಷಯಾಧಾರಿತ, ನುರಿತ ಹಾಗೂ ಸಮರ್ಥ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಲೋಕಾಯುಕ್ತವು ಕೆಲವು ವಿಷಯಗಳಲ್ಲಿ ನೇರವಾಗಿ ಹಾಗೂ ಇನ್ನೂ ಕೆಲವು ಪ್ರಕಾರಣಗಳಲ್ಲಿ ವ್ಯಕ್ತಿ ಹಾಗೂ ಸಂಘಟನೆಗಳು ದಾಖಲಿಸುವ ಪ್ರಕರಣಗಳನ್ನು ಕೈಗೆತ್ತಿಕೊಂಡು ಪರಿಶೀಲನೆ ನಡೆಸಿ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡುತ್ತದೆ. ಖಾಸಗಿ ವ್ಯಕ್ತಿಗಳು ನಮೂನೆ 1 ಮತ್ತು 2 ನ್ನು ಬಳಸಿ, afidavit ಸಲ್ಲಿಸಿ ದೂರು ದಾಖಲಿಸಲು ಅವಕಾಶ ನೀಡಲಾಗಿದೆ. ಇತ್ತೀಚಿಗೆ ದುರುದಾರರ ಆಧಾರ್ ಕಾರ್ಡ್ನ್ನು ಪಡೆದು ಕೊಳ್ಳಲಾಗುತ್ತಿದೆ. ದಾಖಲಿಸುವ ದೂರು ಸುಳ್ಳು ಆಗಿದ್ದಲ್ಲಿ ಲೋಕಾಯುಕ್ತ ಕಾಯ್ದೆ ಸೆಕ್ಷನ್ 17, 19ರಡಿ ದಂಡನೆಗೆ ಗುರಿಪಡಿಸಲಾಗುತ್ತದೆ. ಸಾರ್ವಜನಿಕ ಪರವಾದ ವಿಷಯಗಳಿದ್ದು ಪತ್ರಿಕೆಗಳಲ್ಲಿ ಸಾಕ್ಷ್ಯಗಳೊಂದಿಗೆ ಪ್ರಕಟಕೊಂಡಿದ್ದಲ್ಲಿ ಲೋಕಾ ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳುತ್ತದೆ ಎಂದರು.

ಈ ಸಂದರ್ಭದಲ್ಲಿ ಪಬ್ಲಿಕ್ ಪ್ರಸಿಕ್ಯೂಟರ್ ಸುಂದರ್ ರಾಜ್, ಲೋಕಾಯುಕ್ತ ಎಸ್ ಪಿ. ಮಂಜುನಾಥ್ ಚೌಧಾರಿ ಹಾಗೂ ಲೋಕಾಯುಕ್ತ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *