ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜ ಸುಧಾರಕರಾದ ಭೂಪಾಲo ಆರ್ ಚಂದ್ರಶೇಖರಯ್ಯ ಮಾರ್ಗವನ್ನು ಲೋಕಾರ್ಪಣೆ ಮಾಡಲಾಯಿತು.
ವಿನೋಬನಗರದ ಇಂದಿರಾ ಕ್ಯಾಂಟೀನ್ ನಿಂದ ಎಪಿಎಂಸಿ ವರೆಗೆ ಇರುವ ಮಾರ್ಗಕ್ಕೆ ಶಿವಮೊಗ್ಗಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಭೂಪಾಲo ಚಂದ್ರ ಶೇಖರಯ್ಯ ಮಾರ್ಗವೆಂದು ಅಧಿಕೃತವಾಗಿ ನಾಮಕರಣ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಿಎಸ್ ಅರುಣ್ ಬಹುದಿನದ ಕನಸು ನನಸಾಗಿದೆ. ಆರ್ಯವೈಶ್ಯ ಸಮಾಜ ದೇಶದಲ್ಲಿ ಜನಸಂಖ್ಯೆಯಲ್ಲಿ ಕೇವಲ ಒಂದರಷ್ಟಿದೆ. ಆದರೆ ಆ ಸಮಾಜ ಸಮಾಜಕ್ಕೆ ಶೇಕಡ 30ರಷ್ಟು ಕೊಡುಗೆಗಳನ್ನು ನೀಡಿದೆ ಎಂದರು.
1907ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಡಳಿತಕ್ಕೆ ನೆರವಾಗಲು ಪ್ರಜಾಪ್ರತಿನಿಧಿ ಸಮಿತಿಯನ್ನು ರಚಿಸಿದರು ಆ ಸಮಿತಿಯಲ್ಲಿ ಸದಸ್ಯರಾಗಿ ಭೂಪಾಳಮ್ ಅವರು ಅನೇಕ ಸಲಹೆಗಳನ್ನು ನೀಡಿದ್ದರು ಆ ಸಮಿತಿಯೇ ಈಗ ವಿಧಾನಪರಿಷತ್ ಆಗಿದೆ ಎಂದರು.

ಗಣ್ಯ ವ್ಯಕ್ತಿಗಳು ಮತ್ತು ದಾರ್ಶನಿಕರನ್ನು ನಾವು ಆ ಸಮಾಜದ ವ್ಯಕ್ತಿಗಳಾಗಿ ಸೀಮಿತವಾಗಿ ಮಾಡುತ್ತಿದ್ದೇವೆ. ಮತ್ತು ಅವರ ನೆನಪಿಗಾಗಿ ರಜೆಗಳನ್ನು ನೀಡುತ್ತೇವೆ. ಹಾಗಾಗಬಾರದು ಎಂದು ನಾನು ಸದನದಲ್ಲೂ ವಾದಿಸಿದ್ದೆ. ರಜೆ ನೀಡುವ ಬದಲು ಒಂದು ಗಂಟೆ ಹೆಚ್ಚಿನ ಕೆಲಸ ಮಾಡಿ ಗಣ್ಯರ ಗುಣಗಾನ ಮತ್ತು ಅವರು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಸೇವೆಗಳನ್ನು ತಿಳಿ ಹೇಳುವ ಮತ್ತು ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ . ನಮ್ಮ ದೇಶ ಇತಿಹಾಸದ ನೆಲೆಗಟ್ಟಿ ನ ಮೇಲೆ ನಿಂತಿದೆ .ಸಾಧನೆ ಮಾಡಿರುವ ವರ ಬಗ್ಗೆ ವಿಶ್ಲೇಷಣೆಗಳು ನಡೆಯಬೇಕು. ಸವಿಧಾನ ಕೊಟ್ಟ ಜವಾಬ್ದಾರಿಗಳನ್ನು ನಾವೆಲ್ಲರೂ ಅನುಸರಿಸಬೇಕು ಎಂದರು.


ಶಾಸಕ ಚನ್ನಬಸಪ್ಪ ಮಾತನಾಡಿ ಹಿಂದೂ ಮಹಾಸಭಾ ಸ್ಥಾಪನೆಯಲ್ಲಿ ಭೂಪಾಳಮ್ ಅವರು ಒಬ್ಬರು ಅವರು ಹಾಕಿದ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆಯಬೇಕಾಗಿದೆ. ಸಾವರ್ಕರ್ ಅವರನ್ನು ಶಿವಮೊಗ್ಗಕ್ಕೆ ಕರೆತರುವಲ್ಲಿ ಅವರ ಪಾತ್ರ ಮಹತ್ವದ್ದು. ನಗರದ ರಸ್ತೆಗೆ ಅವರ ಹೆಸರನ್ನು ಇಡಲು ಅನೇಕ ವರ್ಷಗಳು ಬೇಕಾಯಿತು. ಇದು ನಮ್ಮ ಕರ್ತವ್ಯದ ಭಾಗ. ಹಿಂದೂ ಮುಸ್ಲಿಂ ಗಲಾಟೆ ಇವತ್ತು ನಿನ್ನೆದಲ್ಲ. ಗಣಪತಿಯಿಂದ ಗಲಾಟೆಯಾಗುವುದಲ್ಲ ಈ ಮನಸ್ಥಿತಿ 1939 ರಲ್ಲಿ ಬಸವೇಶ್ವರ ದೇವಸ್ಥಾನವನ್ನು ಹೊಡೆದು ಮುಂಭಾಗದ ಅಂಗಡಿಗಳನ್ನು ಲೂಟಿ ಮಾಡಿದ್ದರು. ಅದು ಇತಿಹಾಸ ಈ ಸತ್ಯವನ್ನು ನಾವು ಮರೆಯಬಾರದು ಎಂದರು. ಭೂಪಾಳಮ ಚಂದ್ರಶೇಖರಯ್ಯ ನವರು ಶಿವಮೊಗ್ಗದ ಬಗ್ಗೆ ಆಗಿನ ಕಾಲದಲ್ಲೇ ಅನೇಕ ಯೋಜನೆಗಳನ್ನು ರೂಪಿಸಿ ಆಡಳಿತದ ಗಮನಕ್ಕೆ ತಂದಿದ್ದರು ಅವರ ಕೊಡುಗೆ ಅಮೂಲ್ಯವಾದದ್ದು ಎಂದರು.

ಚಂದ್ರಶೇಖರಯ್ಯ ನವರ ಮಗ ಭೂಪಾಲo ಪ್ರಭಾಕರ್ ಮಾತನಾಡಿ ಕುವೆಂಪು ಅವರ ಸಹಪಾಠಿಯಾಗಿದ್ದ ಅವರು ಸಾಹಿತ್ಯ ಕ್ಷೇತ್ರಕ್ಕೂ ಅನೇಕ ಕೊಡುಗೆ ನೀಡಿದ್ದಾರೆ ಮತ್ತು ಸ್ವತಃ ಪತ್ರಕರ್ತರಾಗಿ ಮಲೆನಾಡು ವಾರ್ತೆ ಪತ್ರಿಕೆಯನ್ನು ಮೂವತ್ತು ವರ್ಷಗಳ ಕಾಲ ನಡೆಸಿದ್ದರು. ಬಡ ಮಕ್ಕಳಿಗೆ ಶಿಕ್ಷಣ ಅನಾಥಾಶ್ರಮ ಅವರಿಗೆ ಉಚಿತ ಊಟ ವಸತಿ. ತುಂಗಾ ನದಿಯ ತೀರದ ಅಭಿವೃದ್ಧಿ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಿದ್ದರು. ನಗರದ ಯಾವುದಾದರೂ ಒಂದು ವೃತ್ತಕ್ಕೆ ಅವರ ಹೆಸರನ್ನು ಇಡಬೇಕೆಂಬುದು ನಮ್ಮ ಆಶೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಭೂಪಾಲಂ ಅವರ ಜೀವನದ ಕೈಪಿಡಿಯನ್ನು ವಿತರಿಸಲಾಯಿತು. ಹಾಗೂ ಅವರ ಜೀವನ ಚರಿತ್ರೆಯ ವಿಡಿಯೋವನ್ನು ಪ್ರದರ್ಶಿಸಲಾಯಿತು. ಮಾಜಿ ಕಾರ್ಪೊರೇಟರ್ ರಾಹುಲ್ ಬಿದರೆ. ಪ್ರಮುಖರಾದ ಭೂಪಾಳಂ ಸತ್ಯನಾರಾಯಣ .ಭೂಪಾಲಮ್ ಶಶಿಧರ್. ಸುಮಾ ಭೂಪಾಳಮ್ ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *