ಖ್ಯಾತ ಲೆಕ್ಕಪರಿಶೋಧಕರಾದ ಕೆ ವಿ ವಸಂತ್ ಕುಮಾರ್ ಹಾಗೂ ಉಷಾ ವಸಂತ್ ಕುಮಾರ್ ಅವರ ಪುತ್ರಿಯಾದ ಸ್ವರ್ಣ ಲತಾ ಅವರಿಗೆ ಅಮೆರಿಕಾದ ಪ್ರತಿಷ್ಠಿತ ಅಲ್ಭಾಮ ವಿಶ್ವವಿದ್ಯಾಲಯದಿಂದ ಏರೋ ಸ್ಪೇಸ್ ಇಂಜಿನಿಯರಿಂಗ್ ನಲ್ಲಿ ಪಿಎಚ್ ಡಿ ಪದವಿ ದೊರೆತಿದ್ದು ಇದು ಶಿವಮೊಗ್ಗಕ್ಕೆ ಹೆಮ್ಮೆಯ ವಿಷಯವಾಗಿದೆ.
ಖ್ಯಾತ ಗಾಯಕ ಹರ್ಷ ಅವರ ಧರ್ಮಪತ್ನಿ ಆಗಿರುವ ಸ್ವರ್ಣ ಲತಾ ಅವರು ಪಿಎಚ್ ಡಿ ಪದವಿ ಪ್ರಧಾನ ಸಮಾರಂಭದಲ್ಲಿ ಹೆತ್ತವರು ಭಾಗಿಯಾಗಿದ್ದರು.
ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಹರ್ಷ ಕಾಮತ್ ಹಾಗೂ ಆಟೋಮೊಬೈಲ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ನಾಗರಿಕ ಹಿತ ರಕ್ಷಣಾ ವೇದಿಕೆ ಕಾರ್ಯದರ್ಶಿ ಡಾ ಸತೀಶ್ ಕುಮಾರ್ ಶೆಟ್ಟಿ ಮತ್ತು ತಂಡ ಸ್ವರ್ಣ ಲತಾ ಅವರಿಗೆ ಶುಭಾಶಯ ಕೋರಿದ್ದಾರೆ.