ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಆಚರಿಸಲಾಗುತ್ತಿರುವ ಅಪರಾಧ ತಡೆ ಮಾಸಾಚರಣೆ–2024 ರ ಅಂಗವಾಗಿ, ಶ್ರೀಮತಿ ಭಾರತಿ, ಪಿಎಸ್ಐ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ರವರು ಟಿಪ್ಪು ನಗರದ ಉರ್ದು ಪಾಠ ಶಾಲೆಯಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ವಿಧ್ಯಾರ್ಥಿಗಳ ಕುರಿತು ಮಾತನಾಡಿ ಈ ಕೆಳಕಂಡ ಮಾಹಿತಿ ನೀಡಿರುತ್ತಾರೆ.
1) ಸಂಚಾರ ನಿಯಮಗಳ ಪಾಲನೆ ನಮ್ಮೆಲ್ಲರ ಹೊಣೆಯಾಗಿರುತ್ತದೆ. ಸುರಕ್ಷತೆಯ ದೃಷ್ಠಿಯಿಂದ ಸಂಚಾರ ನಿಯಮಗಳನ್ನು ಪಾಲನೆ ಮಾಡಿ.
2) ಶಾಲೆಗೆ ಬರುವಾಗ, ಶಾಲೆಯಿಂದ ಹೋಗುವಾಗ ಹಾಗೂ ಇತರೆ ಕಡೆಗಳಲ್ಲಿ ಆತುರದಿಂದ ರಸ್ತೆ ದಾಟ ಬೇಡಿ, ರಸ್ತೆ ದಾಟುವ ಮುನ್ನ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಬರುತ್ತಿವೆಯೇ ಅಥವಾ ಇಲ್ಲವೇ ಎಂದು ಖಚಿತ ಪಡಿಸಿಕೊಂಡು, ವಾಹನಗಳು ಬರುತ್ತಿಲ್ಲವಾದರೆ ಮಾತ್ರ ರಸ್ತೆ ದಾಟಿ.
3) ಹಲವು ಬಾರಿ ಪಾದಚಾರಿಗಳ ಅಜಾಗರೂಕತೆಯಿಂದಲೂ ಸಹಾ ಅಪಘಾತಗಳು ಘಟಿಸಿರುತ್ತವೆ. ಆದ್ದರಿಂದ ಆದಷ್ಟೂ ರಸ್ತೆಯ ಎಡ ಭಾಗ ಮತ್ತು ಫುಟ್ ಪಾತ್ ನಲ್ಲಿಯೇ ನಡೆದುಕೊಂಡು ಹೋಗಿ ಹಾಗೂ ರಸ್ತೆಯಲ್ಲಿ ತುಂಟಾಟವಾಡುತ್ತಾ ಹೋಗಬೇಡಿ ಜಾಗರೂಕರಾಗಿರಿ ನಡೆದುಕೊಂಡು ಹೋಗಿ.
4) 18 ವರ್ಷ ತುಂಬುವುದಕ್ಕಿಂತ ಮುನ್ನ ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಬೇಡಿ. ಇದು ಕಾನೂನಿನ ಅಡಿ ಶಿಕ್ಷಾರ್ಹ ಅಪರಾಧ ಹಾಗೂ ವಾಹನದ ಮಾಲೀಕರಿಗೆ ದಂಡ ಇಲ್ಲವೇ ಶಿಕ್ಷೆ ವಿಧಿಸಲಾಗುವುದು. ಆದ್ದರಿಂದ ಕುತೂಹಲಕ್ಕೂ ಕೂಡ ವಾಹನ ಚಾಲನೆ ಮಾಡಬೇಡಿ ಹಾಗೂ ಸುರಕ್ಷಿತವಾಗಿರಿ ಎಂದು ಹೇಳಿರುತ್ತಾರೆ. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು , ಶಿಕ್ಷಕರು ಮತ್ತು ವಿಧ್ಯಾರ್ಥಿಗಳು ಹಾಗೂ ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.