ಕೇರಳದ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಊಟ ಮತ್ತು ಮೂಲಭೂತ ಸೌಕರ್ಯ ನೀಡಲು ಸಾರ್ಸ್ ಸಂಸ್ಥೆಯ ಮೂಲಕ ಅಕ್ಕಿ ನೀಡಲು ಮುಷ್ಠಿ ಅಕ್ಕಿ ಹಾಗೂ ಇತರೆ ಸಾಮಾಗ್ರಗಳ ಸಂಗ್ರಹಕ್ಕೆ ಆದಿಚುಂಚನಗಿರಿ ಮಠದ ಶ್ರೀಸಾಯಿನಾಥ ಸ್ವಾಮೀಜಿ ಚಾಲನೆ ನೀಡಿದರು.

ಕೆ ಎಸ್ ಈಶ್ವರಪ್ಪ ಮಾತನಾಡಿ ನಗರದ ಪ್ರತಿ ಮನೆಯಿಂದ ಮುಷ್ಠಿ ಅಕ್ಕಿ  ಮತ್ತು ಇತರೆ ಸಾಮಾಗ್ರಿಗಳ ಸಂಗ್ರಹಕ್ಕೆ ವಾಹನಗಳು ಆಗಮಿಸಲಿದ್ದು, ವಾಹನಗಳ ಮೂಲಕ ದಿನಸಿಗಳನ್ನ ಸಂಗ್ರಹಿಸಿ 24 ರಂದು ವಿನೋಬ ನಗರದ ಶುಭ ಮಂಗಳ ಸಮುದಾಯ ಭವನದಲ್ಲಿ ಸಾರ್ವಜನಿಕ ಪಡಿಪೂಜೆ ಹಾಗೂ ಶಕ್ತಿಪೂಜೆ ಮೂಲಕ  ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂಗೆ ಕಳುಹಿಸಿ ಕೊಡಲಾಗುವುದು ಎಂದರು.

ಕೆ ಈ ಕಾಂತೇಶ್ ಮಾತನಾಡಿ ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ಶಿವಮೊಗ್ಗ ನಗರ ಘಟಕದಿಂದ ನಡೆಯುವ ಈ ಅಭಿಯಾನ ಇಂದಿನಿಂದ  ಡಿ.23ರವರೆಗೆ ನಡೆಯಲಿದೆ. 6 ವಾಹನಗಳಲ್ಲಿ ಹೊರಡುವ  ಪ್ರತಿದಿನ 6 ವಾರ್ಡ್ ಗಳಲ್ಲಿ ದಿನಸಿ ಸಾಮಾಗ್ರಿಗಳ ಸಂಗ್ರಹ ನಡೆಯಲಿದೆ.
ಈ ಸಂದರ್ಭದಲ್ಲಿ ಇ.ವಿಶ್ವಾಸ್ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.