ಭದ್ರಾವತಿ ನಗರಸಭೆಗೆ ಜಿಲ್ಲಾಧಿಕಾರಿಗಳ ವಿಶೇಷ ಅನುದಾನದಲ್ಲಿ 1 ಕೋಟಿ ರೂ. ಹಣವನ್ನು ಬಿ.ಪಿ.ಎಲ್. ಮತ್ತು ಅಂತ್ಯೋದಯ ಕಾರ್ಡ್ ಹೊಂದಿದ ಬಡವರಿಗೆ ನ್ಯಾಯಬೆಲೆ ಅಂಗಡಿ ಮೂಲಕ ಆಹಾರ ಪೊಟ್ಟಣವನ್ನು ಹಂಚಲು ನೀಡಿದ್ದು ಭದ್ರಾವತಿ ನಗರಸಭೆ ಅಧಿಕಾರಿಗಳು ಇದುವರೆಗೆ 40% ಬಡ ಕುಟುಂಬಗಳಿಗೆ ಫುಡ್ ಕಿಟ್ ನೀಡಿದ್ದು ಉಳಿದ 60% ಬಡ ಕುಟುಂಬಗಳಿಗೆ ಫುಡ್ ಕಿಟ್ ನೀಡಬೇಕೆಂದು ಕೇಳಿಕೊಳ್ಳುತ್ತಾರೆ. ಅದೇ ರೀತಿ ಭದ್ರಾವತಿ ನಗರಸಭೆ ವ್ಯಾಪ್ತಿಯ 32 ನೇ ವಾರ್ಡ್ ನ ಫಿಲ್ಟರ್ ಶೆಡ್ ಇಲ್ಲಿ ಚರಂಡಿ ರಸ್ತೆ ಮೂಲಭೂತ ಸೌಕರ್ಯದ ಕೊರತೆಯಿದ್ದು ತಕ್ಷಣ ಚರಂಡಿ ಮಾಡ ಬೇಕೆಂದು ಕೇಳಿಕೊಳ್ಳುತ್ತಾರೆ ಹಾಗೆ 32 ನೇ ವಾರ್ಡ್ ನಲ್ಲಿರುವ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಕೊರೋನಾ ಲಸಿಕೆ ಹಾಗೂ ಬಿಪಿ ಶುಗರ್ ಸಣ್ಣಪುಟ್ಟ ಜ್ವರಕ್ಕೆ ಮತ್ತು 1ತಿಂಗಳಿನಿಂದ 7 ನೇ ವರ್ಷದ ತನಕ ಸಣ್ಣ ಮಕ್ಕಳಿಗೆ ವ್ಯಾಕ್ಸೀನ್ ತೆಗೆದುಕೊಳ್ಳಲು ಸಾರ್ವಜನಿಕರು ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಬರುವುದರಿಂದ ಜನಜಂಗುಳಿ ಜಾಸ್ತಿಯಾಗಿ ಕುಳಿತುಕೊಳ್ಳಲು ಜಾಗದ ವ್ಯವಸ್ಥೆ ಕಡಿಮೆ ಇರುವುದರಿಂದ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಮುಂಭಾಗದಲ್ಲಿ 40*30ಅಳತೆಯ ಜಾಗವಿದ್ದು ಆ ಜಾಗಕ್ಕೆ ಕಬ್ಬಿಣದ ಕಂಬಿ ಮತ್ತಿ ಶೀಟ್ ನಿಂದ ಮೇಲ್ಚಾವಣೆಯನ್ನು ನಗರಸಭೆ ವತಿಯಿಂದ ನಿರ್ಮಿಸ ಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಾರೆ, ಇಲ್ಲವಾದಲ್ಲಿ ತಮ್ಮ ಕಚೇರಿಯ ಮುಂದೆ ಶಾಂತಿಯುತವಾಗಿ ಧರಣಿ ಸತ್ಯಾಗ್ರಹ ನಡೆಸಬೇಕೆಂದು ಈ ಮೂಲಕ ತಿಳಿಸುತ್ತಾರೆ.

LIC policy ಗಾಗಿ ಸಂಪರ್ಕಿಸಿ 9538615354

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153