ಶಿವಮೊಗ್ಗ ನಗರದ ಬಿಬಿ ರಸ್ತೆಯಲ್ಲಿರುವ ಜೆಪಿಎನ್ ಪ್ರೌಢ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಜರುಗಿತು. ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಮೇಶ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಗೌರಿ ಶ್ರೀನಾಥ್ ಅವರು ಕೂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪಾಸಿಟಿವ್ ಮೈಂಡ್ ಕ್ಲಿನಿಕ್ ಮನೋವೈದ್ಯರಾದ ಅರವಿಂದ್ ಎಸ್ ಟಿ ಅವರು ಸಮಾರೋಪ ಭಾಷಣವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗಂಗಮ್ಮ ಮುಖ್ಯ ಶಿಕ್ಷಕರು ಸಿಗಹಟ್ಟಿ ಶಾಲೆ, ರೇಣುಕಮ್ಮ ಮುಖೇಶ್ ಶಿಕ್ಷಕರು ದೊಡ್ಡಪೇಟೆ ಶಾಲೆ, ಕವಿತಾ ಮುಖ್ಯ ಶಿಕ್ಷಕರು ಬಿ ಬಿ ಸ್ಟ್ರೀಟ್ ಶಾಲೆ, ಶರಾವತಿ ಮುಖ್ಯ ಶಿಕ್ಷಕರು ಭೂಪಾಲo ಶಾಲೆ,
ಇಂಪಲ ಮುಖ್ಯ ಶಿಕ್ಷಕರು ಜ್ಞಾನದಾ ರ ಶಾಲೆ ವಾಣಿ ಮುಖ್ಯ ಶಿಕ್ಷಕರು ಜ್ಞಾನ ಪ್ರಭ ಶಾಲೆ ಭಾಗವಹಿಸಿದ್ದರು. ಜೆಪಿಎನ್ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಶ್ರೀ ಇಮ್ತಿಯಾಸ್ ಅಹಮದ್ ರವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿಗಳ ಸಾಕಾರದೊಂದಿಗೆ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿತು.
ವರದಿ ಟೀಮ್ ಪ್ರಜಾ ಶಕ್ತಿ