ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಅಶೋಕ ನಗರದಲ್ಲಿ ನಡೆದ 69ನೇ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಭುವನಗಿರಿಯಿಂದ ಕನ್ನಡ ಜ್ಯೋತಿಯನ್ನು ತಂದು ಕಾರ್ಯಕ್ರಮದ ಉದ್ಘಾಟನೆ ನಡೆಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಕೃಷ್ಣೇಗೌಡರು ಹಾಗೂ ಕರವೇ ಸ್ವಾಭಿಮಾನಿ ಬಣದ ಕಾನೂನು ಸಲಹೆಗಾರರಾದ ಟಿ.ಕೆ ಅನಿಲ್ ಕುಮಾರ್ ಹಾಗೂ ಮುಖ್ಯ ಅತಿಥಿಗಳಿಂದ ಕಾರ್ಯಕ್ರಮ ಉದ್ಘಾಟನೆ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರು ಹಾಗೂ ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷರಾದ ಶ್ರೀ ಕೆಬಿ ಪ್ರಸನ್ನ ಕುಮಾರ್. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ರಮೇಶ್ ರವರು ಹಾಗೂ ರೋಟರಿ ಅಧ್ಯಕ್ಷರು ಶಿವಮೊಗ್ಗ  ಸೆಂಟ್ರಲ್ ನ ಶ್ರೀಯುತ ಕಿರಣ್ ಕುಮಾರ್ ಜಿ ಭಾಗಿಯಾಗಿದ್ದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ  ಎಚ್ಎಸ್ ಕಿರಣ್ ಕುಮಾರ್ ವಹಿಸಿದ್ದರು.ಕೇವಲ ಹೋರಾಟಕ್ಕೆ ಅಷ್ಟೇ ಸೀಮಿಕ ಸೀಮಿತವಾಗದೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಹಾಯದಲ್ಲೂ ಮುಂದಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಪಾಳ್ಯ ಗ್ರಾಮದ ಮಾರಿಕಾಂಬ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 20 ಸಾವಿರ ರೂಪಾಯಿಗಳನ್ನು ದೇಣಿಗೆಯಾಗಿ ನೀಡಲಾಯಿತು.ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸೇವ ರತ್ನ ಪ್ರಶಸ್ತಿಯನ್ನು ನೀಡಲಾಯಿತು.

ಸೇವ ರತ್ನ ಪ್ರಶಸ್ತಿ ವಿಜೇತರು ಶ್ರೀಯುತ ರೇವಣಸಿದ್ದಯ್ಯ ಅರಣ್ಯ ಇಲಾಖೆ ಶಿವಮೊಗ್ಗ ನಾಗರಾಜ್ ವನ್ಯಜೀವಿ ಮತ್ತು ಪತ್ರಿಕಾ ವಿಭಾಗ ಹಾಗೂ ದಾನಂ ಸಿನಿಮಾ ನಟ ಹಾಗೂ ಕಿರುಚಿತ್ರ ನಿರ್ಮಾಪಕರು ಮತ್ತು ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡ ವಿಭಾಗದಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿನಿ ಸಂಜನಾ ತಿವಾರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುವಾಗಿ ಪಂಚಭಾಷ ಚಲನಚಿತ್ರ ನಟ ರಘುರಾಜ್ ಮಲ್ನಾಡ್ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಸಂಘದ ಪದಾಧಿಕಾರಿಗಳಿಗೆ ರಾಜ್ಯ ಅಧ್ಯಕ್ಷರ ಮುಖಾಂತರ ಆದರ್ಶ ಪತ್ರವನ್ನು ನೀಡಲಾಯಿತು ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಶ್ರೀಯುತ ಕವಿತಾ .ಸಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಈ ಕಾರ್ಯಕ್ರಮದ ನಿರೂಪಕರಾಗಿ ಶಂಕರ್ ಚೀಲೂರವರು ನೆರವೇರಿಸಿದರು ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು ಮತ್ತು ಪ್ರೀತಂ ಮಲೋಡಿ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿತ್ತು
ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಪದಾಧಿಕಾರಿಗಳು ಸಾರ್ವಜನಿಕರು ಗಣ್ಯರು ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಜಿಲ್ಲಾಧ್ಯಕ್ಷರು ಕಿರಣ್ ಕುಮಾರ್ ಎಚ್ಎಸ್ ಅವರು ತಿಳಿಸಿದ್ದಾರೆ.

ವರದಿ ಟೀಮ್ ಪ್ರಜಾ ಶಕ್ತಿ