ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ 67 ಮತಗಳಾಂತರದಿಂದ ಸೋಲಿಸಿ ಎರಡನೇ ಬಾರಿಗೆ ರಾಜ್ಯಾಧ್ಯಕ್ಷರ ಪಟ್ಟವನ್ನ ಅಲಂಕರಿಸಿದ ಸಿಎಸ್ ಷಡಾಕ್ಷರಿ ಇದು ಸತ್ಯ ನಿಷ್ಠೆ ಕಾಯಕಕ್ಕೆ ಸಂದ ಜಯ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು ಕಳೆದ ಹತ್ತು ವರ್ಷಗಳಿಂದ ಶಿವಮೊಗ್ಗ ಜಿಲ್ಲೆ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ 2019 ರಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮೊದಲ ಬಾರಿ ಸ್ಪರ್ಧೆ ಮಾಡಿ 57 ಮತಗಳ ಅಂತರದಿಂದ ಆಯ್ಕೆಯಾಗಿದ್ದೆ.ಐದು ವರ್ಷಗಳ ಅವಧಿಯಲ್ಲಿ ನೌಕರ ಪರವಾದ ಹಲವಾರು ಕಾರ್ಯಕ್ರಮಗಳನ್ನ ಸರ್ಕಾರದೊಂದಿಗೆ ಚರ್ಚಿಸಿ ರೂಪಿಸಿದ್ದೇನೆ ಅದರ ಪರಿಣಾಮವಾಗಿ ಈ ಬಾರಿ 67 ಮತಗಳ ಅಂತರದಿಂದ ಗೆಲುವು ಕಂಡಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ 971 ಮತದಾರರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಮತ ಮಾಡುವ ಹಕ್ಕನ್ನ ಪಡೆದಿದ್ದರೂ ಶಿವಮೊಗ್ಗ ಜಿಲ್ಲೆಯಲ್ಲಿ 28 ಮತದಾರರು ಮತದಾನದ ಹಕ್ಕನ್ನ ಪಡೆದಿದ್ದಾರೆ ಅದರಲ್ಲಿ 27 ಮತಗಳು ನನಗೆ ಬಿದ್ದಿವೆ ಎಂದ ಅವರು ಇದೀಗ ನನ್ನ ಮುಂದೆ ಸರ್ಕಾರಿ ನೌಕರರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನ ರೂಪಿಸುವಷ್ಟೇ ಗುರಿಯಾಗಿದೆ ಎಂದು ಹೇಳಿದರು.

ಮುಂದಿನ ವರ್ಷ nps ನೌಕರರು ಓಪಿಎಸ್ ಯೋಜನೆಗೆ ಪರಿವರ್ತನೆ ಆಗಬೇಕು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತುಕತೆಗೆ ಕಾಲಾವಕಾಶ ಕೇಳಿದ್ದೇನೆ.ಸಿಎಂ ನನಗೆ ಅವಕಾಶ ನೀಡಿದ್ದಾರೆ ಈ ಕುರಿತು ಅವರೊಂದಿಗೆ ಚರ್ಚೆ ನಡೆಸಲಿದ್ದೇನೆ ಎಂದ ಅವರು ಕೇಂದ್ರದ ಮಾದರಿಯ ವೇತನವನ್ನು 2026ರಲ್ಲಿ ಕೊಡಿಸುವಂತಹ ಗುರಿಯನ್ನು ಗೊಂದಲಾಗಿದೆ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜನವರಿ ಒಂದರಿಂದ ಜಾರಿಗೆ ಬರುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿ ಅದನ್ನು ಅನುಷ್ಠಾನಕ್ಕೆ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಎರಡನೇ ಬಾರಿಗೆ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ನೌಕರರ ಕಾರ್ಯಕ್ಕೆ ನಾನು ಚಿರಋಣಿಯಾಗಿದ್ದಾನೆ.ಅವರ ಅಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮುಂದಿನ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ನನ್ನ ವಿರುದ್ಧ ಎಷ್ಟೇ ಅಪಪ್ರಚಾರ ನಡೆದರೂ ನಾನು ಅದಕ್ಕೆ ಟೀಕಿಸುವ ಗೋಜಿಗೆ ಹೋಗಲಿಲ್ಲ ಮಾಡಿರುವ ಕಾರ್ಯ ನನ್ನ ಮುಂದಿರುವ ಗುರಿಗಳು ಇವುಗಳ ಬಗ್ಗೆ ನೌಕರರ ಹಾಗೂ ಮತದಾರರಲ್ಲಿ ವಿನಂತಿಸಿದೆ ಅದರ ಪರಿಣಾಮವಾಗಿ ಗೆಲುವು ಸುಲಭವಾಗಿ ಬಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನೌಕರ ಸಂಘದ ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಪ್ರಧಾನ ಕಾರ್ಯದರ್ಶಿ ಪಾಪಣ್ಣ ಭದ್ರಾವತಿ ತಾಲೂಕು ನೌಕರ ಸಂಘದ ಅಧ್ಯಕ್ಷ ಸಿದ್ಬಸಪ್ಪ ಜಿಲ್ಲಾ ಸಂಘದ ಗೌರವಾಧ್ಯಕ್ಷ ಡಾಕ್ಟರ್ ಹಿರೇಮಠ್ ಮುಂತಾದವರು ಉಪಸ್ಥಿತರಿದ್ದರು.