ಅಬಕಾರಿ ಅಪರ ಆಯುಕ್ತರು ಅಬಕಾರಿ ಇಲಾಖೆ, ಕೇಂದ್ರ ಸ್ಥಾನ ಬೆಳಗಾವಿ ರವರ ಹಾಗೂ ಅಬಕಾರಿ ಜಂಟಿ ಆಯುಕ್ತರು,ದಾವಣಗೆರೆ ವಿಭಾಗ ಮತ್ತು ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ ರವರ ನಿರ್ದೇಶನದಲ್ಲಿ ಮತ್ತು ಅಬಕಾರಿ ಉಪ ಅದೀಕ್ಷಕರು,ಶಿವಮೊಗ್ಗ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಅಬಕಾರಿ ನೀರಿಕ್ಷಕರು ಶಿವಮೊಗ್ಗ ವಲಯ 1 ಹಾಗೂ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ ಅಂಡರ್ ಪಾಸ್ ನಲ್ಲಿ KA 17 HQ 0728 ಹೀರೊ ಸ್ಪ್ಲೆಂಡರ್ ದ್ವಿ ಚಕ್ರ ವಾಹನದಲ್ಲಿ ಹರೀಶ್ ಬಿನ್ ಗಿರೀಶ ಮತ್ತು ಶಿವು ಬಿನ್ ರಾಘವೇಂದ್ರ, ಅಸ್ಥಾಪನಹಳ್ಳಿ , ನಲ್ಲೂರು ಚೆನ್ನಗಿರಿ ತಾ,ದಾವಣಗೆರೆ ಇವರುಗಳು 180ml ಸಾಮರ್ಥ್ಯದ 170 McDowells ವಿಸ್ಕಿಯ ಒಟ್ಟು 30.6ಲೀಟರ್ ಗೋವ ಮದ್ಯ ಸಾಗಾಣಿಕೆ ಮಾಡುವುದನ್ನು ಪತ್ತೇಹಚ್ಚಿ ನೀರಿಕ್ಷಕರು ಸದರಿಯವರ ವಿರುದ್ದ ಘೋರ ಪ್ರಕರಣ ದಾಖಲಿಸಿದ್ದಾರೆ.