ಕುಂದಾಪುರದಲ್ಲಿ ಡಿಸೆಂಬರ್ 29ರಂದು ನಡೆದ ಪ್ರಾಂತೀಯ ಸಮ್ಮೇಳನದಲ್ಲಿ ಸೀನಿಯರ್ ಚೇಂಬರ್ ಶಿವಮೊಗ್ಗ ಭಾವನದ ಅಧ್ಯಕ್ಷ ರಾದ ಶಶಿಕಲಾ ಶೆಟ್ಟಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಅವಾರ್ಡ್ಗಳನ್ನು ಪಡೆದು ಶಿವಮೊಗ್ಗದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಪ್ರಾಂತೀಯ ಸಮ್ಮೇಳನದಲ್ಲಿ ಶಿವಮೊಗ್ಗ ಭಾವನಕ್ಕೆ G&D ವಿಭಾಗದಲ್ಲಿ, ಕಮ್ಯುನಿಟಿ ಡೆವಲಪ್ಮೆಂಟ್ ವಿಭಾಗದಲ್ಲಿ ಸಂಸ್ಥೆಗೆ ಅತಿ ಹೆಚ್ಚು ದೇಣಿಗೆ ನೀಡಿದ್ದಕ್ಕಾಗಿ( PPF) ಹೀಗೆ ಹಲವಾರು ವಿಭಾಗದಲ್ಲಿ ಹಲವಾರು ಪ್ರಶಸ್ತಿಗಳು ಸಿಕ್ಕಿವೆ.ಮಾತ್ರವಲ್ಲದೆ
ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್, ಔಟ್ ಸ್ಟ್ಯಾಂಡಿಂಗ್ ಲೀಜನ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಈ ಸುವರ್ಣ ಗಳಿಗೆಯಲ್ಲಿ ಒಂದೇ ವರ್ಷದಲ್ಲಿ ಎರಡು ಬಾರಿ PPF ನೀಡುವುದರ ಮೂಲಕ ರಾಷ್ಟ್ರ ಅಧ್ಯಕ್ಷರ ಕಡೆಯಿಂದ ಮನ್ನಣೆ ಸ್ವೀಕರಿಸಿದ ಸೀನಿಯರ್ ಪ್ರೇಮಾ ಮತ್ತು ತಂಡದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸುಸಂದರ್ಭದಲ್ಲಿ ಲಿಜನ್ ಬುಲೆಟಿನ್ ಬಿಡುಗಡೆಗೆ ಸಹಕಾರ ನೀಡುವುದರ ಜೊತೆಗೆ ಸಪೋರ್ಟಿಂಗ್ ಶೈನಿಂಗ್ ಸ್ಟಾರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸೀನಿಯರ್ ವಾಣಿ ರತ್ನಾಕರ್
ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಉಪಸ್ಥಿತರಿದ್ದು ಸಹಕರಿಸಿದ ಸೀನಿಯರ್ ಸುರೇಖಾ ಮುರಳಿಧರ್ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ವಿಶೇಷವಾಗಿ ಧನ್ಯವಾದ ತಿಳಿಸಿದರು.
ಈ ಎಲ್ಲಾ ಪುರಸ್ಕಾರಗಳನ್ನು ನೀಡಿ ನಮ್ಮೊಂದಿಗೆ ಸದಾ ನಮ್ಮನ್ನು ಪ್ರೋತ್ಸಾಹಿಸಿ ಹುರಿದುಂಬಿಸುವ ಸಹಕಾರ ನೀಡುತ್ತಿರುವ NVP ಪುಷ್ಪ ಶೆಟ್ಟಿ ಅವರಿಗೂ ವಿಶೇಷ ಅಭಿನಂದನೆ ತಿಳಿಸಿದರು. ಇದೇ ಸಂದರ್ಭದಲ್ಲಿ ಪುಷ್ಪ ಶೆಟ್ಟಿ ರವರಿಗೆ ಗೋಲ್ಡನ್ STAR ಅಚೀವರ್ಸ್ ಅವಾರ್ಡ್ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೀನಿಯರ್ ಶಶಿಕಲಾ ಕೆ ಎಸ್
ಅಧ್ಯಕ್ಷರು,
ಶಿವಮೊಗ್ಗ ಭಾವನಾ
ಪುಷ್ಪ ಶೆಟ್ಟಿ ನ್ಯಾಷನಲ್ ವೈಸ್ ಪ್ರೆಸಿಡೆಂಟ್
ಸುರೇಖಾ ಮುರಳಿದರ್
ನ್ಯಾಷನಲ್ co- ordinater ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.