ಪೊಲೀಸ್ ಅಧೀಕ್ಷಕರು, ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು ಹಾಗೂ ಕರ್ನಾಟಕ ಲೋಕಾಯುಕ್ತ ವತಿಯಿಂದ ಜ.23, 24, 28 ಹಾಗೂ 29 ರಂದು ಬೆಳಿಗ್ಗೆ 11 ಗಂಟೆಯಿAದ 12.30 ವರವರೆಗೆ ಸಾರ್ವಜನಿಕರ ಕುಂದು ಕೊರತೆಯ ಅರ್ಜಿ ಸ್ವೀಕಾರ ಸಭೆ ನಡೆಸಲಾಗುವುದು.


ಈ ಸಭೆಯಲ್ಲಿ ಸಾರ್ವಜನಿಕರು ತಮ್ಮ ಅಹವಾಲನ್ನು ನೀಡಲು ಅವಕಾಶವಿದ್ದು, ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ದೊರಕಿಸುವಲ್ಲಿ ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ, ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷö್ಯ, ಅನಗತ್ಯ ವಿಳಂಬ ಮತ್ತು ಅಧಿಕೃತ ಕೆಲಸ ನಿರ್ವಹಿಸಲು ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ದ ಸಾರ್ವಜನಿಕರು ಲಿಖಿತ ಅಹವಾಲುವನ್ನು ನೀಡಬಹುದಾಗಿದೆ.


ಜ.23 ರ ಬೆಳಿಗ್ಗೆ 11 ಗಂಟೆಯಿAದ 12.30 ರವರೆಗೆ ತಾಲ್ಲೂಕು ಕಛೇರಿ ಸಭಾಂಗಣ ಸೊರಬ, ತಾಲ್ಲೂಕು ಕಛೇರಿ ಸಭಾಂಗಣ ತೀರ್ಥಹಳ್ಳಿ, ಜ.24 ರ ಬೆಳಿಗ್ಗೆ 11 ಗಂಟೆಯಿAದ 12.30 ರವರೆಗೆ ತಾಲ್ಲೂಕು ಕಛೇರಿ ಸಭಾಂಗಣ ಶಿಕಾರಿಪುರ, ತಾಲ್ಲೂಕು ಪಂಚಾಯಿತಿ ಸಭಾಂಗಣ ಸಾಗರ, ಜ.28 ರ ಬೆಳಿಗ್ಗೆ 11 ಗಂಟೆಯಿAದ 12.30 ರವರೆಗೆ ತಾಲ್ಲೂಕು ಕಛೇರಿ ಸಭಾಂಗಣ ಹೊಸನಗರ, ಭದ್ರಾವತಿ ನಗರಸಭೆ ಸಭಾಂಗಣ ಭದ್ರಾವತಿ, ಜ.29 ರ ಬೆಳಿಗ್ಗೆ 11 ಗಂಟೆಯಿAದ 12.30 ರವರೆಗೆ ತಾಲ್ಲೂಕು ಪಂಚಾಯತ್ ಸಭಾಂಗಣ ಶಿವಮೊಗ್ಗ ಈ ಸ್ಥಳಗಳಲ್ಲಿ ಸಾರ್ವಜನಿಕ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸಲಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.