ಡೆಲ್ಲಿ ವರ್ಡ್ ಶಾಲೆಯ ಶಾಲಾ ವಾರ್ಷಿಕೋತ್ಸವ ಹಾಗೂ ನೂತನ ಕ್ರೀಡಾಂಗಣವನ್ನು ಶಿವಮೊಗ್ಗ ನಗರದ ಶಾಸಕ ಎಸ್ಎನ್ ಚೆನ್ನಬಸಪ್ಪ ಉದ್ಘಾಟಿಸಿದರು.


ನಗರದ ಡೆಲ್ಲಿ ವರ್ಲ್ಡ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಮೊಟ್ಟ ಮೊದಲ ಬಾರಿಗೆ ನಮ್ಮ ನಗರದಲ್ಲಿ ಸಿಂಥೆಟಿಕ್ ಬಾಸ್ಕೆಟ್ಬಾಲ್, ಸಿಂಥೆಟಿಕ್ ಸ್ಕೇಟಿಂಗ್ ಹಾಗೂ ಕ್ರಿಕೆಟ್ ಪಿಚ್ ಕ್ರೀಡಾಂಗಣಗಳ ಉದ್ಘಾಟನಾ ಕಾರ್ಯಕ್ರಮ ತುಂಬಾ ವಿಜೃಂಭಣೆಯಿಂದ ಆಚರಿಸಲಾಯಿತು.

ಅಧ್ಯಕ್ಷರಾಗಿ ಸಂಸ್ಥೆಯ ಚೇರ್ಮನ್ ಶ್ರೀಯುತ ನಲ್ಲ ಪಾರ್ಟಿ ವೆಂಕಟೇಶ್ವರ ರಾವ್ ಅವರ ಅಧ್ಯಕ್ಷತೆಯನ್ನು ವಹಿಸಿದ್ದು.ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ಶುಭ ಹಾರೈಸಿದರು.

ನಂತರ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ದಿವ್ಯ ಶೆಟ್ಟಿ ಅವರು ಶೈಕ್ಷಣಿಕ ವರ್ಷ 2024 – 25ರ ಶಾಲಾ ವಾರ್ಷಿಕ ವರದಿಯನ್ನು ಓದುವುದರ ಮುಖಾಂತರ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಸರ್ವತೋಮುಖ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಎಸ್.ಎನ್ ಚನ್ನಬಸಪ್ಪ, ಶ್ರೀ ಹೇಮಂತ್ ಎನ್ ಹಾಗೂ ಎಂ.ಎಲ್. ಸಿ. ಡಿ. ಎಸ್ ಅರುಣ್ ಮಾತನಾಡಿ ಈ ಶಾಲೆಯ ಗುಣಮಟ್ಟ ಶಿಕ್ಷಣವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.

ವಿಶೇಷ ಗಾಯಕಿ ಶ್ರೀಮತಿ ಶಿವಾನಿ ನವೀನ್ ರವರು ಕಾರ್ಯಕ್ರಮದಲ್ಲಿ ಹಾಜರಿದ್ದು ತಮ್ಮ ಮನೋಹರ ಗಾಯನದ ಮೂಲಕ ಎಲ್ಲರನ್ನು ರಂಜಿಸಿದರು. ಮಕ್ಕಳ ಹಲವು ಅದ್ಭುತವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ಶಿಕ್ಷಕರು ಅಷ್ಟೇ ಅಲ್ಲದೆ ಜೊತೆಗೆ ಪೋಷಕರು ಸಹ ನೃತ್ಯವನ್ನು ಮಾಡುವುದರ ಮೂಲಕ ಈ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.