ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಎಚ್ ಎಸ್ ಸುಂದರೇಶ್ ರವರ ನೇತೃತ್ವದಲ್ಲಿ ಆಗಸ್ಟ್ 10 ಮಂಗಳವಾರ ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ಬಾಲರಾಜ್ ಅರಸ್ ರಸ್ತೆಯ ಮೂಲಕ ಮಹಾವೀರ ಸರ್ಕಲ್ ನಿಂದ ನಂತರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನೆಯ ಮನವಿ ಪತ್ರ ಸಲ್ಲಿಸಲಾಗುವುದು. * ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಹಿಂಪಡೆಯಲು ಆಗ್ರಹ : ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಿದ್ಯುತ್ ಕಾಯ್ದೆ ತಿದ್ದುಪಡಿ ಪ್ರಸ್ತಾಪ ರೈತರು ಹಾಗೂ ಗ್ರಾಹಕರ ಹಿತಾಸಕ್ತಿಗೆ ಮಾರಕ ವಾಗಲಿದೆ ಎಂಬ ಭೀತಿ ಜನಸಾಮಾನ್ಯರಲ್ಲಿ ಆತಂಕ ಉಂಟಾಗಿದೆ ಏಕಪಕ್ಷೀಯವಾಗಿ ಕಾಯಿದೆಗೆ ತಿದ್ದುಪಡಿ ಮಾಡುವುದು ಸರಿಯಲ್ಲ , ಈ ಪ್ರಸ್ತಾಪನೆಯನ್ನು ತಕ್ಷಣ ಕೈಬಿಡಬೇಕು ಎಂದು ಒತ್ತಾಯಪಡಿಸಲಾಗಿದೆ.ರೈತರಿಗೆ ಉಚಿತವಾಗಿ ನೀಡುತ್ತಿದ್ದ 10 ಎಚ್. ಪಿ ವರೆಗಿನ ಮತ್ತು ಬಡವರಿಗೆ ನೀಡುತ್ತಿದ್ದ ಸಬ್ಸಿಡಿ ದರದ ವಿದ್ಯುತ್ ಪೂರೈಕೆಯಲ್ಲಿ ಹಿಂದಕ್ಕೆ ಪಡೆದಿದ್ದರಿಂದ ಭವಿಷ್ಯದಲ್ಲಿ ರೈತರು ಈಗಿನ ಸೌಲಭ್ಯ ಸವಲತ್ತುಗಳಿಂದ ವಂಚಿತರಾಗಿದ್ದಾರೆ. *ಅಗತ್ಯ ವಸ್ತುಗಳ ಬೆಲೆ ಏರಿಕೆ : ಅಗತ್ಯ ವಸ್ತುಗಳಾದ ಅಡುಗೆ ಎಣ್ಣೆ ಬೇಳೆ ಕಾಳುಗಳು ತರಕಾರಿಗಳು ಸೇರಿದಂತೆ ಬೆಲೆ ಏರಿಕೆಯಾಗಿದ್ದು ಇದರಿಂದಾಗಿ ಅಡುಗೆಗೆ ಉಪಯೋಗದ ವಸ್ತು ಕೈಗೆ ಎಟುಕದೆ ಶ್ರೀ ಸಾಮಾನ್ಯರು ಆತಂಕಗೊಂಡಿದ್ದಾರೆ ದಿನನಿತ್ಯದ ವಸ್ತುಗಳಾದ ಅಗತ್ಯವಸ್ತು ಇಲ್ಲದೆ ಅರೆಹೊಟ್ಟೆಯಲ್ಲಿ ಮಲಗುವ ಪರಿಸ್ಥಿತಿ ಸಾಮಾನ್ಯ ಜನರಿಗೆ ಉಂಟಾಗಿದೆ ಇದರಿಂದ ಬಿಜೆಪಿಗರ ಸಾಧನೆ ಬಡವರ ಬಾಳಿಗೆ ಆತಂಕಕಾರಿಯಾಗಿದೆ. * ಆಸ್ತಿ ತೆರಿಗೆ ಹೆಚ್ಚಳ : ಲಾಕ್ ಡೌನ್ ಕೊರೋನಾದಿಂದಾಗಿ ರಾಜ್ಯದ ಜನ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು ಆಸ್ತಿ ತೆರಿಗೆ ಹೆಚ್ಚಳದ ಮೂಲಕ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಬರೆ ಹಾಕಿದಂತಾಗಿದೆ. * ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ಜಿಗಿದಿದೆ : ಕಳೆದ 1 ತಿಂಗಳಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ ರೂ106-66 ಪೈಸೆ ಶೇ ರಷ್ಟು ಏರಿಕೆಯಾಗಿದೆ ಮತ್ತು ಡೀಸೆಲ್ ದರ ರೂ 96-48 ಪೈಸೆ ರಷ್ಟು ಏರಿಕೆಯಾಗಿದೆ ಇದರಿಂದಾಗಿ ವಾಹನ ಸವಾರರಿಗೆ ಮತ್ತು ಲಾರಿ,ಬಸ್ , ಟ್ಯಾಕ್ಸಿ ಮಾಲೀಕರಿಗೆ ಪೆಟ್ರೋಲ್ ಡೀಸೆಲ್ ದರದ ಬಿಸಿ ತಟ್ಟಿದಂತಾಗಿದೆ. * ಎಲ್. ಪಿ.ಜಿ ಗ್ಯಾಸ್ ಸಿಲಿಂಡರ್ ದರ ದಿಡೀರ್ ಭಾರಿ ಪ್ರಮಾಣದಲ್ಲಿ ಏರಿಕೆ : 2ವಾರಗಳ ಹಿಂದಷ್ಟೇ ಗೃಹಬಳಕೆ ಎಲ್ ಪಿಜಿ ಸಿಲಿಂಡರ್ ದರ ದಿಢೀರ್ ನೇ 100 ₹ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. 15 ಜಿಲ್ಲೆಯಲ್ಲಿ 2ಬಾರಿ ದರ ಏರಿಕೆಯಿಂದಾಗಿ ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ನೀಡಲಾಗಿದೆ. * ವಿದ್ಯುತ್ ದರ ಏರಿಕೆ, ಸಣ್ಣ ಉದ್ಯಮ, ರೈತರಿಗೆ ನಷ್ಟ ,ಸಾಮಾನ್ಯ ಜನರಿಗೆ ಸಂಕಷ್ಟ : ಎಸ್ಕಾಂಗಳ ನಷ್ಟದ ಹೊರೆ ಸರಿದೂಗಿಸಲು ಜ 1 ರಿಂದ ಮಾರ್ಚ್ 31 ರವರೆಗೆ ಸೀಮಿತವಾಗಿ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 4 ನಿಂದ 8 ಪೈಸೆಯವರೆಗೆ ಹೆಚ್ಚಳ ಮಾಡಲು ಅವಕಾಶ ಕಲ್ಪಿಸಿ ಕೆಇಆರ್ ಸಿ ಆದೇಶ ಹೊರಡಿಸಿದೆ. * ದೇಶದಲ್ಲಿ ಅಚ್ಚೇ ದಿನ್ ಎಲ್ಲಿದೆ: ದೇಶದಲ್ಲಿ ಅಚ್ಚೇ ದಿನ್ ತರುತ್ತೇನೆಂದು ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರದ ದುರಾಡಳಿತದಿಂದ ಎಲ್ಲ ವಸ್ತುಗಳ ಬೆಲೆಗಳು ಕೂಡ ಏರಿಕೆ ಕಂಡು ಶ್ರೀಸಾಮಾನ್ಯರು ಪರದಾಡುವಂತಾಗಿದೆ. ಕೋವಿಡ್ ಸಂಕಷ್ಟದಲ್ಲಿರುವ ದೇಶದ ಜನತೆಯ ನೆರವಿಗೆ ಬರಬೇಕಾದ ಸರ್ಕಾರ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಕರ್ನಾಟಕ ರಾಜ್ಯಕ್ಕೆ ನೆರೆ ಪರಿಹಾರ ಜಿಎಸ್ ಟಿ ತೆರಿಗೆಯಿಂದ ಬರಬೇಕಾದ ಪರಿಹಾರದ ಹಣವನ್ನು ನೀಡದೆ ಮಲತಾಯಿ ದೋರಣೆ ಮಾಡುತ್ತಿರುವುದು ತೀವ್ರವಾಗಿ ಖಂಡಿಸಲಾಗಿದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153