ದಿನಾಂಕ: 08.02.2025 ರ ಶನಿವಾರ ಸಂಜೆ 6.00 ಗಂಟೆಗೆ ಸರಿಯಾಗಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ “ಶಾಂತಲಾ ಸ್ಪೇರೂಕ್ಯಾಸ್ಟ್ ಸಭಾಂಗಣ” ಸಿಟಿ ಕ್ಲಬ್ ಹಿಂಭಾಗ ಈ ಸ್ಥಳದಲ್ಲಿ ಪಾಲಿಕೆಯ “ಇ – ಸ್ವತ್ತು” ಸಮಸ್ಯೆ ಕುರಿತು ಸಾರ್ವಜನಿಕ ಸಭೆಯನ್ನು ಕರೆಯಲಾಗಿದೆ.
ಈ ಸಭೆಯಲ್ಲಿ ಇ – ಸ್ವತ್ತು ವಿಚಾರವಾಗಿ ಪಾಲಿಕೆಯಿಂದ ಆಗುತ್ತಿರುವ ತೊಂದರೆ, ಅನಾನುಕೂಲ, ವಿಳಂಬ ಇವೆ ಮುಂತಾದ ವಿಚಾರಗಳನ್ನು ಸಂಪೂರ್ಣವಾಗಿ ಚರ್ಚಿಸಿ ಸುಗುಮವಾಗಿ ಇ – ಸ್ವತ್ತು ದಾಖಲೆ ನೀಡಲು ಪಾಲಿಕೆಯಲ್ಲಿ ಆಗಬೇಕಾದ ಬದಲಾವಣೆಯ ಬಗ್ಗೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು.
ಪಾಲಿಕೆ ಎಲ್ಲಾ ಖಾತೆದಾರರು ಈ ಸಭೆಯಲ್ಲಿ ಭಾಗವಹಿಸಬೇಕಾಗಿ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆ ವಿನಂತಿಸಿದರು.
🙏🙏