
ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ,ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ಪೊಲೀಸ್, ಶಿವಮೊಗ್ಗ ಸಂಚಾರ ಪೊಲೀಸ್ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತೆಯ ಒಂದು ಭಾಗವಾದ, ರಸ್ತೆ ಸುರಕ್ಷತಾ ಜಾಗೃತಿಯ ಒಂದು ದಿನದ ಶಿಬಿರವನ್ನು, 40 ಮೈಭಾರತ್ ಸ್ವಯಂ ಸೇವಕರಿಗೆ ದಿನಾಂಕ 12.02.2025 ರಂದು ಡಿ.ಆರ್ ಪೊಲೀಸ್ ಸಭಾಂಗಣ ದಲ್ಲಿ ಹಮ್ಮಿಕೊಳ್ಳಲಾಗಿದ್ದು. ಈ ಶಿಬಿರವನ್ನು ಶಿವಮೊಗ್ಗ ಪೊಲೀಸ್ ಇಲಾಖೆಯ, ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀ. ಅನಿಲ್ಕುಮಾರ್ ಎಸ್ ಭೂಮರೆಡ್ಡಿರವರು ಉದ್ಘಾಟಿಸಿದರು.
ಸಂಚಾರ ಸುರಕ್ಷತೆ ನಿಯಮಗಳಲ್ಲಿ ಭಾರತೀಯ ನ್ಯಾಯ ಸಂಹಿತೆ,ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ,ಭಾರತೀಯ ಸಾಕ್ಷ್ಯ ಅಧಿನಿಯಮ-2023 ಈ ಕಾನೂನಿನ ಅಡಿಯಲ್ಲಿ ರಸ್ತೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಶಿಕ್ಷೆ ಮತ್ತು ದಂಡದ ಪ್ರಮಾಣವನ್ನು ಹೆಚ್ಚಿಗೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು . ಟ್ರಾಫಿಕ್ ಇನ್ಸೆಪೆಕ್ಟರ್ ಶ್ರೀ. ಸಂತೋಷ್ಕುಮಾರ್ ಡಿ.ಕೆ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಶ್ರೀ. ಉಲ್ಲಾಸ್ರವರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಂಚಾರ ಪೊಲೀಸ್ ಇಲಾಖೆಯ ಪಿ.ಎಸ್.ಐ ಶ್ರೀ.ತಿರುಮಲೇಶ್,ಟ್ರಾಫಿಕ್ ಪೊಲೀಸ್ ಮಂಜುನಾಥ್ ಪಾಟೀಲ್ರವರು ವಾಹನಗಳ ಇನ್ಷುರೆನ್ಸ್ ಬಗ್ಗೆ, ಸಂಚಾರ ನಿಯಮಗಳನ್ನು ಹೇಗೆ ಅನುಸರಿಸಬೇಕು. ವಿದ್ಯಾರ್ಥಿಗಳು 18 ವರ್ಷದ ನಂತರ ಕಡ್ಡಾಯವಾಗಿ ತಾವೇ ಆನ್ಲೈನ್ ಮೂಲಕ ಸ್ವತ: ವಾಹನ ಪರವಾನಗಿ ಮಾಡಿಸಬೇಕು. ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ಸಭಾಂಗಣದಿಂದ ನೆಹರು ರಸ್ತೆಯಲ್ಲಿರುವ ಸಂಚಾರ ನಿಯಂತ್ರಣ ಕೇಂದ್ರದವರೆಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಥಾವನ್ನು ನಡೆಸಲಾಯಿತು. ಅಲ್ಲಿ ಶಿಬಿರಾರ್ಥಿಗಳಿಗೆ ಸಂಚಾರಿ ಅಪರಾಧ ಉಲ್ಲಂಘನೆಗಳ ಮತ್ತು ದಂಡಗಳ ಬಗ್ಗೆ ಮಾಹಿತಿ ನೀಡಿದರು. ಅಶೋಕ ವೃತ್ತದಲ್ಲಿ ಶಿಬಿರಾರ್ಥಿಗಳಿಗೆ ಟ್ರಾಫಿಕ್ ಸಿಗ್ನಲ್ಗಳ ಬಗ್ಗೆ ಪ್ರಾಯೋಗಿಕವಾಗಿ ವಿವರಣೆ ನೀಡಲಾಯಿತು. ಎಲ್ಲರಿಗೂ ಮೈಭಾರತ್ ಲೋಗೋ ಇರುವ ಟೀಶರ್ಟ್, ಕ್ಯಾಪ್,ಪುಸ್ತಕ ಪೆನ್ವುಳ್ಳ ಕಿಟ್ ಅನ್ನು ವಿತರಿಸಲಾಯಿತು. ನಂತರ ಸರ್ಟಿಫೀಕೆಟ್ ನೀಡಲಾಯಿತು.