ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ, ಗ್ರಾಮ ಪಂಚಾಯತಿ, ನಗರ ಇವರ ಸಂಯುಕ್ತ ಆಶ್ರಯದಲ್ಲಿ ಐ.ಸಿ.ಎ.ಆರ್. ಟಿ.ಎಸ್.ಪಿ. ಯೋಜನೆ “ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಜೇನುಸಾಕಾಣೆಯ ತಂತ್ರಗಳೊAದಿಗೆ ಪರಿಶಿಷ್ಟ ಪಂಗಡಗಳ ಸಬಲೀಕರಣ” ಅಡಿಯಲ್ಲಿ “ಜೇನು ಸಾಕಾಣಿಕೆ ತರಬೇತಿ”ಯನ್ನು ಫೆ 10 ರಿಂದ 12 ರ ವರೆಗೆ ಹೊಸನಗರ ತಾಲ್ಲೂಕಿನ ಗ್ರಾಮ ಪಂಚಾಯತಿ, ನಗರದಲ್ಲಿ ಪರಿಶಿಷ್ಟ ಪಂಗಡದ ರೈತರಿಗೆ ಹಮ್ಮಿಕೊಳ್ಳಲಾಗಿತ್ತು.


ಈ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀಮತಿ ಸಂಗೀತ, ಅಧ್ಯಕ್ಷರು, ಗ್ರಾಮ ಪಂಚಾಯತಿ, ನಗರ ರವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಶಿಬಿರಾರ್ಥಿಗಳಿಗೆ ಜೇನು ಸಾಕಾಣಿಕೆಯನ್ನು ವೃತ್ತಿಯಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು.
ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಗಣ್ಯರು ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರದೊಂದಿಗೆ ಜೇನು ಸಾಕಾಣಿಕೆಗೆ ಬೇಕಾದ ಪರಿಕರಗಳನ್ನು ವಿತರಣೆ ಮಾಡಿದರು. ನಗರ ಗ್ರಾ.ಪಂ. ಸದಸ್ಯ ಜಾತಪ್ಪ ಗೌಡರು ಜೇನು ಹುಳಗಳು ಬೆಳೆಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಅತ್ಯಮೂಲ್ಯ ಪಾತ್ರವಹಿಸುತ್ತಿದ್ದು, ಜೇನು ಸಾಕಾಣೆಯನ್ನು ವೃತ್ತಿಯಾಗಿ ಅಳವಡಿಸಿಕೊಂಡು ದೇಶದ ಆರ್ಥಿಕ ಪ್ರಗತಿಗೆ ಕೈ ಜೋಡಿಸಬೇಕೆಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.


ನಗರ ಗ್ರಾ.ಪಂ.ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಚಂದ್ರ ಅವರು ಜೇನು ಸಾಕಾಣೆ ತರಬೇತಿಯಲ್ಲಿ ನೀಡಿರುವ ಪರಿಕರಗಳನ್ನು ಸದುಪಯೋಗಪಡಿಸಿಕೊಂಡು ಆಸಕ್ತಿಯಿಂದ ಜೇನು ಸಾಕಾಣೆ ವೃತ್ತಿಯನ್ನು ಆರಂಭಿಸಲು ಸಲಹೆ ನೇಡಿದರು. ಹೊಸನಗರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗರತ್ನ ಎಂ. ಸಿ., ಇವರು ಶಿಭಿರಾರ್ಥಿಗಳಿಗೆ ಜೇನು ಸಾಕಾಣೆಯನ್ನು ದೊಡ್ಡ ಮಟ್ಟದಲ್ಲಿ ಉದ್ಯಮವಾಗಿ ಕೈಗೊಂಡರೆ ಪಂಚಾಯತಿಯಿAದ ಉತ್ಪಾದಿಸಿದ ಜೇನು ತುಪ್ಪಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.


ಶಿಭಿರಾರ್ಥಿಗಳಾದ ಶ್ರೀಮತಿ ಕಲಾವತಿ ಮತ್ತು ಗಾಯತ್ರಿಯವರು ತಮ್ಮ ಅನಿಸಿಕೆಯಲ್ಲಿ ಈ ಜೇನು ಸಾಕಾಣೆ ತರಬೇತಿಯಲ್ಲಿ ಕಲಿತ ತಾಂತ್ರಿಕ ಮಾಹಿತಿ ಮತ್ತು ಪ್ರಾಯೋಗಿಕ ಕಲಿಕೆ ಜೇನು ಸಾಕಾಣೆಯನ್ನು ವೃತ್ತಿಯನ್ನಾಗಿ ಮಾಡಲು ಆತ್ಮವಿಶ್ವಾಸ ಮೂಡಿಸಿದೆ. ಜೇನು ಸಾಕಾಣೆಯನ್ನು ಆರ್ಥಿಕ ಸಬಲೀಕರಣಕ್ಕೆ ವೃತ್ತಿಯನ್ನಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಡಾ. ಜಯಲಕ್ಷ್ಮೀ ನಾರಾಯಣ ಹೆಗಡೆ, ನೋಡಲ್ ಅಧಿಕಾರಿ ಹಾಗೂ ಪ್ರಾಧಾನ ಪರಿಶೋಧಕರು ಮೂರು ದಿನಗಳ ಕಾಲ ನಡೆದ ತರಬೇತಿಯ ಕುರಿತು ವಿವರಣೆ ನೀಡಿದರು. ಡಾ. ನವೀನ್ ಎನ್. ಎಲ್., ಸಹಾಯಕ ಪ್ರಾಧ್ಯಾಪಕರು (ಕೃಷಿ ಕೀಟಶಾಸ್ತ್ರ) ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿಶ್ವೇಶ ತಲಕಾಲಕೊಪ್ಪ, ಸುಧೀರ್ ಮತ್ತು ಮನೋಹರ ಉಪಸ್ಥಿತರಿದ್ದರು. ಹೊಸನಗರ ಹಾಗೂ ನಗರದ ಸುತ್ತಮುತ್ತಲಿನ ಹಳ್ಳಿಯ 30 ರೈತ ಮಹಿಳೆಯರು/ರೈತರು ಈ ತರಬೇತಿಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *