DR.SKS-RESPONSIBLE AND ACTIVE CITIZENSHIP AWARD…

ಶಿವಮೊಗ್ಗ ನಗರದ ಮಧುರಾ ಪ್ಯಾರಡೈಸ್ ನಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್, ವತಿಯಿಂದ ವಿಶೇಷ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಹಲವಾರು ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಡಾ ಸತೀಶ್ ಕುಮಾರ್ ಶೆಟ್ಟಿ ರವರನ್ನು ಸನ್ಮಾನಿಸಿ ವಿಶೇಷ ಬಿರುದನ್ನು ನೀಡಿದರು.

ಡಾ. ಎ ಸತೀಶ್ ಕುಮಾರ್ ಶೆಟ್ಟಿ ಇವರ ಪ್ರಸ್ತುತ ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಮತ್ತು ಸಮಾಜದ ಒಳಿತಿಗಾಗಿ ಮಾನವಿತೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಕಾರ್ಯ ವೈಖರಿಯನ್ನು ಮೆಚ್ಚಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ತಂಡವು ಮಾನವೀಯ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪತ್ನಿ ವಾತ್ಸಲ್ಯ ಶೆಟ್ಟಿ ರವರನ್ನು ಅಭಿನಂದಿಸಲಾಯಿತು.ಈ ಸಮಯದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಪುಷ್ಪ ಶೆಟ್ಟಿ ಮತ್ತು ಸುರೇಖಾ ಮುರಳಿಧರ್ ಶಶಿಕಲಾ ಶೆಟ್ಟಿ ಮುಂತಾದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

“RESPONSIBLE AND ACTIVE
CITIZENSHIP AWARD”
Honoured for Active involvement and Meritorious Service to Humanity and Community

Leave a Reply

Your email address will not be published. Required fields are marked *