
“ಸನಾತನ ಶಕ್ತಿಯ ಮಹಾಕುಂಭಮೇಳದ ತ್ರಿವೇಣಿ ಸಂಗಮದಲ್ಲಿ”
ಉತ್ತರ ಪ್ರದೇಶ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳ ಕುಂಭ ಪರ್ವಕೆ ಶಿವಮೊಗ್ಗ ಸಂಸದರಾದ ರಾಘವೇಂದ್ರ ದಂಪತಿ ಸಮೇತ ಭೇಟಿ ನೀಡಿ ವಿಶೇಷ ಸ್ಥಾನ ಮಾಡಿದರು.ಸನಾತನ ಹಿಂದೂ ಧರ್ಮದ ವಿಶ್ವದರ್ಶನದ ರೂಪದಲ್ಲಿ ತನ್ನ ನೈಜತೆಯನ್ನು ಪ್ರದರ್ಶಿಸುವ ಸರಿ ಸುಮಾರು 144 ವರ್ಷಗಳಿಗೊಮ್ಮೆ ನಡೆಯುವ “ಮಹಾ ಕುಂಭಮೇಳ” ದಲ್ಲಿ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಪುನೀತನಾದೆ ಎಂದರು.
ಮೂರು ದಿನಗಳ ಹಿಂದೆ ಶಿವಮೊಗ್ಗದಿಂದ ಕುಂಭಮೇಳಕ್ಕೆ ವಿಶೇಷ ರೈಲನ್ನು ಸಹ ಸಂಸದರು ಭಕ್ತಾದಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದರು.ಲೋಕಸಭಾ ಕ್ಷೇತ್ರದ ಜನಹಿತ ಕಾಯಕ ಮಾಡಲು ಇನ್ನಷ್ಟು ಶಕ್ತಿ ನೀಡುವಂತೆ ಹಾಗೂ ನಾಡಿನ ಒಳಿತಿಗಾಗಿ ಈ ಸಂದರ್ಭದಲ್ಲಿ ವಿಶೇಷವಾಗಿ ಪ್ರಾರ್ಥನೆ ಮಾಡಿಕೊಂಡರು.