
ಭಾರತ ರಾಷ್ಟ್ರೀಯ ವಿದ್ಯಾರ್ಥಿ ಘಟಕದ (NSUI) ಸಾಗರ ತಾಲೂಕು ಅಧ್ಯಕ್ಷನಾಗಿ ಸಿ ಎಂ ಚಿನ್ಮಯ್ ನೇಮಕವಾಗಿದ್ದಾರೆ.ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್ ಎಸ್.ಎನ್. ಹಾಗೂ ಎಲ್ಲ ಪದಾಧಿಕಾರಿಗಳು ಮತ್ತು ಮುಖ್ಯವಾಗಿ ಕಳೆದ ಒಂದು ದಶಕದಿಂದ ಗುರುವಿನ ರೀತಿಯಲ್ಲಿ ಮಾರ್ಗದರ್ಶಕರಾಗಿರುವ ಜಿಲ್ಲೆಯ ಜನಪ್ರಿಯ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಸೋದರನಂತೆ ಕೈ ಹಿಡಿದು ನಡೆಸುತ್ತಿರುವ ಅಶೋಕ್ ಬೇಳೂರು,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್ ಗೌಡ, ಯುವ ಮುಖಂಡರಾದ ಮಧುಸೂದನ್, ಚೇತನ್ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ನ ಎಲ್ಲ ಆತ್ಮೀಯ ಪದಾಧಿಕಾರಿಗಳು, ಮುಖಂಡರುಗಳಿಗೆ ಧನ್ಯವಾದ ತಿಳಿಸಿದ್ದಾರೆ.