ಯಕ್ಷ ಹಬ್ಬ 2025…

ಯಕ್ಷಸಂವರ್ಧನ ಶಿವಮೊಗ್ಗ ವತಿಯಿಂದ ನಗರದ ಸುವರ್ಣ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷ ಹಬ್ಬ 2025 ವಿಶೇಷ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಬಂಟರ ಯಾನೆ ನಡೆದ ಸಂಘದ ಹಿರಿಯರು ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಶೆಟ್ಟಿ (ಮಮತಾ ಟ್ರಾವೆಲ್ಸ್) ಮತ್ತು ಅನುಪಮಾ ಕುಮಾರ್ ಭಾಗವಹಿಸಿದ್ದರು.

ಇನ್ನು ಉಪನ್ಯಾಸಕರಾಗಿ ಡಾ ಕೆ ಜಿ ವೆಂಕಟೇಶ್ ಮತ್ತು ಐನಬೈಲ್ ಪರಮೇಶ್ವರ್ ಹೆಗಡೆ ಉಪಸ್ಥಿರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷ ಪ್ರೇಮಿ ಶ್ರೀ ಆನಂದ್ ಶೆಟ್ಟಿ ರವರು ವಹಿಸಿದ್ದರು. ನಿರ್ದೇಶಕರಾಗಿ ಸುರೇಶ್ ಶೆಟ್ಟಿ ಉದಯ್ ಕಡಂಬ ಮತ್ತು ಮುಂತಾದವರು ಉಪಸ್ಥಿತರಿದ್ದರು.

ವಿಶೇಷವಾಗಿ ಪ್ರಥಮ ದಿನದ ಕಾರ್ಯಕ್ರಮದಲ್ಲಿ ಸಮುದ್ರ ಮಂಥನ ಮತ್ತು ಎರಡನೇ ದಿನದ ಕಾರ್ಯಕ್ರಮದಲ್ಲಿ ಕಾಲನಿಮಿ ಕಾಳಗ ಮತ್ತು ಶಂಬಕಾಸುರ ಕಾಳಗ ಮತ್ತು ಭೈರವಲೀಲೆ ಯಕ್ಷಗಾನ ನಡೆಯಿತು. ಅತಿಥಿಯಾಗಿ ಪಾಲ್ಗೊಂಡ ಅತಿಥಿಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಯಕ್ಷಗಾನ ಎನ್ನುವುದು ಸುಮಾರು ವರ್ಷಗಳ ಹಿಂದೆ ಕರಾವಳಿ ಜಿಲ್ಲೆಯಲ್ಲಿ ಪ್ರಾರಂಭವಾಗಿ ಈಗ ರಾಷ್ಟ್ರಾದ್ಯಂತ ಯಕ್ಷ ಪ್ರೇಮಿಗಳ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜಿಲ್ಲೆಯಲ್ಲಿ ಮತ್ತು ಇತರೆ ಕಡೆ ಯಕ್ಷಗಾನ ಯಶಸ್ವಿಯಾಗಿ ನಡೆಯಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಮತ್ತು ಇತರ ಜಿಲ್ಲೆಯ ಈ ಯಕ್ಷ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

Leave a Reply

Your email address will not be published. Required fields are marked *