ಶಿವಮೊಗ್ಗ ನಗರದ ಡಿಪೋ ವೃತ್ತ, ಲಕ್ಷರ್ ಮೊಹಲ್ಲಾ, ಆಲ್ಕೊಳ ಮೋರ್, ವಿನೋಬನಗರ ಸೋಮಿನಕೊಪ್ಪ, ಹನುಂತ ನಗರ, ಕುಂಸಿ ಟೌನ್, ಹರ್ಷ ತಿರುವು, ಹೆಲಿಪ್ಯಾಡ್ ವೃತ್ತ, ಭದ್ರಾವತಿ ನಗರದ ಜಿಂಕ್ ಲೈನ್, ಸೀಗೇ ಬಾಗಿ, ಉಜನೀಪುರ, ಶಿವಾಜಿ ವೃತ್ತ, ಬಾಬಳ್ಳಿ, ಜಂಬರಘಟ್ಟ, ಭದ್ರಾವತಿ ಅಂಡರ್ ಬ್ರಿಡ್ಜ್, ತೀರ್ಥಹಳ್ಳಿ ಟೌನ್ ರಥ ಬೀದಿ, ಬೆಜುವಳ್ಳಿ, ಹೊಸನಗರ ಟೌನ್, ರಿಪ್ಪನ್ ಪೇಟೆ, ಸಾಗರದ ಎಸ್ ಎನ್ ವೃತ್ತ, ಹೆಲಿಪ್ಯಾಡ್, ಮುಂಬಾಳ, ಶಿಕಾರಿಪುರದ ಎಪಿಎಂಸಿ, ಅಂಬರಗೊಪ್ಪ, ಶಿರಾಳಕೊಪ್ಪ, ಸೊರಬ ಟೌನ್, ಆನವಟ್ಟಿ ನೆಹರೂ ನಗರದಲ್ಲಿ , ಶಿವಮೊಗ್ಗ ಎ, ಶಿವಮೊಗ್ಗ ಬಿ, ಭದ್ರಾವತಿ, ಸಾಗರ, ಶಿಕಾರಿಪುರ ಹಾಗೂ ತೀರ್ಥಹಳ್ಳಿ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯಾ ಠಾಣೆಗಳ ಠಾಣಾಧಿಕಾರಿಗಳು ಬ್ರೀಫಿಂಗ್ ಮಾಡಿ ಠಾಣಾ ಸಿಬ್ಬಂದಿಗಳು ನಿರ್ವಹಿಸಬೇಕಾದ ಕರ್ತವ್ಯಗಳು ಹಾಗೂ ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಸಂಬಂದಪಟ್ಟ ಪೊಲೀಸ್ ನಿರೀಕ್ಷಕರು / ವೃತ್ತ ನಿರೀಕ್ಷಕರುಗಳು ಉಪಸ್ಥಿತರಿದ್ದರು ಹಾಗೂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದುಕೊರತೆಯನ್ನು ಆಲಿಸಲಾಗಿರುತ್ತದೆ.