ಶಿವಮೊಗ್ಗದ ಉಸ್ತುವಾರಿ ಸಚಿವರು ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಹುಟ್ಟು ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಯಿತು. ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ನಡೆದರೆ ಮತ್ತೊಂದೆಡೆ ಜ್ಞಾನೇಶ್ವರಿ ಗೋಶಾಲೆಯಲ್ಲಿ ಯುವ ಮುಖಂಡ ವಿನಯ್ ತಾಂದಲೆ ನೇತೃತ್ವದಲ್ಲಿ ಮೇವು ಹಂಚುವ ಮೂಲಕ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ಮತ್ತೊಂದೆಡೆ ನಗರದ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಆರ್, ಕೆಪಿಸಿಸಿ ಸಂಯೋಜಕರಾದ ಜಿಡಿ ಮಂಜುನಾಥ್ , ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ, ಕಲ್ಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾದ ಯು ಶಿವಾನಂದ್ ,ಸುನಿಲ್, ಶಿವಾನಂದ, ಭಾಸ್ಕರ್, ಮಾಜಿ ಮಹಾನಗರ ಪಾಲಿಕೆ ಸದ್ಯಸರು ಆದ ಪಾಲಾಕ್ಷಿ, ಮಂಜುನಾಥ್ ನಾವುಲೆ, ಮಂಜುನಾಥ್ ಪುರಲೇ, ಗ್ಯಾರಂಟಿ ಯೋಜನೆ ಸದಸ್ಯರಾದ ಬಸವ ಮುಂತಾದವರು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *