ಬಿ.ಎಸ್.ಯಡಿಯೂರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಇಂದು ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಅಮೃತ ಅನ್ನದಾಸೋಹ ಪ್ರತಿಷ್ಠಾನದ ಸಹಯೋಗದೊಂದಿಗೆ ಅನ್ನದಾನ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಇದೊಂದು ಉತ್ತಮ ಕಾರ್ಯಕ್ರಮ. ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗೆ ಬಂದ ಸಂಬAಧಿಕರಿಗೆ ವಾರದಲ್ಲಿ ಎರಡು ದಿನ ಅಮೃತ ಅನ್ನದಾಸೋಹ ಪ್ರತಿಷ್ಠಾನದಿಂದ ಸುಮಾರು 600ಕ್ಕೂ ಹೆಚ್ಚು ಜನರಿಗೆ ಅನ್ನದಾನ ಮಾಡಲಾಗುತ್ತಿರುವುದು ಉತ್ತಮ ಕಾರ್ಯಕ್ರಮವಾಗಿದೆ.

ಹಸಿದವರಿಗೆ ಅನ್ನದಾಸೋಹ ಒಂದು ಶ್ಲಾಘನೀಯ ಕಾರ್ಯಕ್ರಮವಾಗಿದ್ದು, ತಂದೆಯ ಹುಟ್ಟಿದ ಹಬ್ಬದ ದಿವಸ ಅವರ ಅಭಿಮಾನಿಗಳು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ನನಗೆ ಸಂತೋಷ ತಂದಿದೆ. ಎಲ್ಲರೂ ಅವರವರ ಕುಟುಂಬದ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ರೀತಿಯ ಅನ್ನದಾಸೋಹಕ್ಕೆ ಮುಂದಾದಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಮತ್ತು ಅವರ ಸಂಬAಧಕರಿಗೆ ಅನುಕೂಲವಾಗುತ್ತದೆ. ಅದೇ ರೀತಿ ಅವರಿಗೆ ರಾತ್ರಿ ತಂಗಲು ಮತ್ತು ತುರ್ತು ಸಂದರ್ಭದಲ್ಲಿ ಒಂದು ಆಸರೆಯಾಗಿ ಒಂದು ಷೆಡ್‌ನ ಅವಶ್ಯಕತೆ ಇದೆ ಎಂದು ಆಡಳಿತ ತಿಳಿಸಿದ ಮೇರೆಗೆ ಅದಕ್ಕೂ ಕೂಡ ಕ್ರಮ ಕೈಗೊಳ್ಳವುದಾಗಿ ಭರವಸೆ ನೀಡಿದರು.


ಹೂವಿನ ಜೊತೆಗೆ ನಾರು ಸ್ವರ್ಗ ಸೇರಿದಂತೆ ಇವತ್ತಿನ ಕಾರ್ಯಕ್ರಮ ಹಲವು ಊರುಗಳಿಂದ ಬಂದ ಮಧ್ಯಮ ಮತ್ತು ಬಡ ವರ್ಗದ ಜನರಿಗೆ ಅನುಕೂಲವಾಗಿದೆ. ಬಿ.ಎಸ್.ವೈ ಕಾಲದಲ್ಲಿ ಈ ಆಸ್ಪತ್ರೆ 1100 ಬೆಡ್‌ಗೆ ಮೇಲ್ದರ್ಜೆಗೆ ಏರಿದ್ದಲ್ಲದೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತನೆಯಾಯಿತು. ಅದಕ್ಕೆ ಎಲ್ಲರ ಸಹಕಾರವು ಸಿಕ್ಕಿದ್ದೇ ಕಾರಣವಾಯಿತು ಎಂದರು.

ಈ ಸಂದರ್ಭದಲ್ಲಿ ಪ್ರತಿಷ್ಠಾನದ ಡಾ.ಸತೀಶ್ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಹುಟ್ಟಿದ ಹಬ್ಬಕ್ಕೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಯುವ ಈ ದಾಸೋಹ ಕಾರ್ಯಕ್ರಮಕ್ಕೆ ಸಹಕಾರ ನೀಡಬಹುದು ಎಂದರು.


ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷಕರಾದ ತಿಮ್ಮಪ್ಪ, ಜಿಲ್ಲಾ ಸರ್ಜನ್ ಸಿದ್ದನಗೌಡ ಪಾಟೀಲ್, ಸಿಈಓ ಉಮಾ ಹಾಗೂ ಪ್ರತಿಷ್ಠಾನದ ಪ್ರಮುಖರಾದ ಸತ್ಯನಾರಾಯಣ್ ಬಿಜೆಪಿ ಪ್ರಮುಖರಾದ ದಿವಾಕರ್ ಶೆಟ್ಟಿ ರಾಜೇಶ್ ಕಾಮತ್ , ಜಗದೀಶ್, ನಾಗರಾಜ್, ಸಂತೋಷ್ ಬಳ್ಳಕೆರೆ, ಸುರೇಖಾ ಮುರಳೀಧರ್, ಶಿಲ್ಪ ಶ್ರೀನಿವಾಸ್, ಮಂಗಳ ನಾಗೇಂದ್ರ, ಬಾಬಿ, ನಾಗರಾಜ್, ಎನ್.ಡಿ.ಸತೀಶ್,ಶಿವರಾಜ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *