ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ತಾ ಹೊಳಲೂರು ಹೋಬಳಿ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮತ್ತೋಡು ಗ್ರಾಮದ ಒಟ್ಟು 84 ಸ್ವತ್ತುಗಳು ಈ ಹಿಂದೆ ಅಬ್ಬಲಗೆರೆ ಗ್ರಾಮಕ್ಕೆ ಸೇರ್ಪಡೆ ಆಗಿದ್ದು, ಇದರಿಂದ ಸಾರ್ವಜನಿಕರಿಗೆ ಇಸ್ವತ್ತು ದಾಖಲೆ ನೀಡಲು ತೊಂದರೆಯಾಗುತ್ತಿದ್ದರಿಂದ ಸದರಿ 84 ಸ್ವತ್ತುಗಳನ್ನು ಅಬ್ಬಲಗೆರೆ ಗ್ರಾಮದಿಂದ ಮತ್ತೊಡು ಗ್ರಾಮಕ್ಕೆ ವರ್ಗಾವಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಸದರಿ ವಿಷಯದ ಬಗ್ಗೆ ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ ಎಸ್ ಅರುಣ್ ಅವರ ಸದನದಲ್ಲಿ ಗಮನಕ್ಕೆ ತಂದರು. 

ಈ ಸಂದರ್ಭದಲ್ಲಿ ಹೆಚ್ಚಿನ ಆದ್ಯತೆ ನೀಡಿ ಸಂಬಂಧಿಸಿದ ಮೇಲಾಧಿಕಾರಿಗಳೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಿ ಅತ್ಯಂತ ಕಡಿಮೆ ಸಮಯದಲ್ಲಿ ಸದರಿ 84 ಸ್ವತ್ತುಗಳನ್ನು ಅಬ್ಬಲಗೆರೆ ಗ್ರಾಮದಿಂದ ಮತ್ತೋಡು ಗ್ರಾಮಕ್ಕೆ ವರ್ಗಾವಣೆ ಮಾಡಿಸಿಕೊಟ್ಟಿದ್ದು ಸದರಿ ಎಲ್ಲಾ 84 ಸ್ವತ್ತುಗಳು ಮತ್ತೋಡು ಗ್ರಾಮಕ್ಕೆ ವರ್ಗಾವಣೆ ಆಗಿರುತ್ತವೆ ಎಂದು ತಿಳಿಸಿದರು.

ಈ ಮೂಲಕ ವಿಧಾನ ಪರಿಷತ್ ಶಾಸಕರು ಮತ್ತು ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ ಎಸ್ ಅರುಣ್ ಅವರಿಗೆ ಗ್ರಾಮ ಪಂಚಾಯ್ತಿ ಪರವಾಗಿ ಹೃತ್ತೂರ್ವಕವಾದ ಅಭಿನಂಧನೆಗಳನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *