
ವಿಶ್ವ ಬೊಜ್ಜು ನಿವಾರಣಾ ದಿನಾಚರಣೆಯ ಅಂಗವಾಗಿ ಶಿವಮೊಗ್ಗದ ಭಾರತೀಯ ವೈದ್ಯಕೀಯ ಸಂಘ ಮತ್ತು ಭಾರತೀಯ ಮಕ್ಕಳ ವೈದ್ಯರ ಸಂಘ ಜಂಟಿಯಾಗಿ ಸೈಕಲ್ ಜಾಥಾ ಹಮ್ಮಿಕೊಂಡಿದ್ದರು. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ ನಾಗರಾಜ ನಾಯ್ಕ ಜಾಥಾಗೆ ಚಾಲನೆ ಕೊಟ್ಟರು. ಭಾರತೀಯ ವೈದ್ಯಕೀಯ ಸಂಘದ ಆವರಣದಿಂದ ಹೊರಟು, ಕುವೆಂಪು ರಸ್ತೆಯ ಮೂಲಕ
ಎ ಪಿ ಎಂ ಸಿ,ಯಿಂದ ಫ್ರೀಡಂ ಪಾರ್ಕ್ ತಲುಪಿದ ಜಾಥಾದಲ್ಲಿ ಸದಸ್ಯರು “ಸೈಕಲ್ ಬಳಸಿ, ಬೊಜ್ಜನ್ನು ಕರಗಿಸಿ” ಎಂಬ ಘೋಷಣೆಗಳನ್ನು ಕೂಗುತ್ತಾ ಜನಜಾಗೃತಿಯನ್ನು ಮೂಡಿಸಿದರು.
ಜನ ಸಾಮಾನ್ಯರಲ್ಲಿ ಬೊಜ್ಜಿನಿಂದ ಆರೋಗ್ಯದ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅರಿವನ್ನು ಮೂಡಿಸಿದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ ಶ್ರೀಧರ ಎಸ್, ಕಾರ್ಯದರ್ಶಿ ಡಾ ವಿನಯ ಶ್ರೀನಿವಾಸ್, ಭಾರತೀಯ ಮಕ್ಕಳ ವೈದ್ಯರ ಸಂಘದ ಅಧ್ಯಕ್ಷ ಡಾ ಯತೀಶ್, ಕಾರ್ಯದರ್ಶಿ ಡಾ ರಾಜಾರಾಮ್ ಯು ಹೆಚ್, ಖಜಾಂಚಿ ಡಾ ವಿನೋದ್, ಡಾ ಶ್ರೀಕಾಂತ್ ಹೆಗಡೆ, ಡಾ ರವೀಶ್ ಕೆ ಆರ್, ಡಾ ಶಾಂತಲಾ, ಡಾ ವಿನಯ್ ಪಾಟೀಲ್, ಡಾ ಅರುಣ್ ಎಂ ಎಸ್, ಡಾ ಚೇತನ್ ಸಾಗರ್, ರಾಜೇಂದ್ರ ಪ್ರಸಾದ್ ಜವಳಿ, ಮತ್ತಿತರರು ಜಾಥಾದಲ್ಲಿ ಭಾಗವಹಿಸಿದ್ದರು.